ತಿರುವನಂತಪುರ: ದ್ವಿಲಿಂಗಿ ಅನನ್ಯಾ ಕುಮಾರಿ ಅಲೆಕ್ಸ್ ಸಾವಿನ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಆರೋಗ್ಯ ನಿರ್ದೇಶಕರಿಗೆ ತನಿಖೆಗೆ ಸೂಚನೆ ನೀಡಿರುವರು. ಈ ಸಂಬಂಧ ಟ್ರಾನ್ಸ್ ಜೆಂಡರ್ಸ್ ಸಂಘಟನೆಯೂ ದೂರು ನೀಡಿತ್ತು. ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಸಚಿವೆ ತಿಳಿಸಿರುವರು.
ದ್ವಿಲಿಂಗಿ ಕಾರ್ಯಕರ್ತೆ ಅನನ್ಯಾ ಕುಮಾರಿ ಅಲೆಕ್ಸ್ ಅವರು ನಿನ್ನೆ ಸಂಜೆ ಕೊಚ್ಚಿ ಎಡಪ್ಪಳ್ಳಿಯ ಅವರ ಫ್ಲ್ಯಾಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಫ್ಲಾಟ್‌ನ ಫ್ಯಾನ್‌ಗೆ ನೇಣುಬಿಗಿದು ಸಾವನ್ನಪ್ಪಿದ್ದರು. ಶಸ್ತ್ರಚಿಕಿತ್ಸೆಯ ನಂತರದ ದೈಹಿಕ ಸಮಸ್ಯೆಗಳ ಪರಿಣಾಮವೇ ಆತ್ಮಹತ್ಯೆಗೆ ಕಾರಣವೆಂದು ಪ್ರಾಥಮಿಕ ತನಿಖೆ ತಿಳಿಸಿದೆ. ಪೊಲೀಸರು ಅನನ್ಯಾ ಅವರ ಸ್ನೇಹಿತರಿಂದ ಹೇಳಿಕೆ ದಾಖಲಿಸಿದ್ದಾರೆ. ಇಂದು ಹೆಚ್ಚಿನ ಜನರಿಂದ ಮಾಹಿತಿ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.