ಕಾಸರಗೋಡು: ಅತ್ಯುತ್ತಮ ನೌಕರಿ ಅವಕಾಶಗಳನ್ನು ಸೃಷ್ಟಿಸುವ ವಲಯಗಳಿಗೆ ವಿದ್ಯಾರ್ಥಿಗಳನ್ನು ಕೈಹಿಡಿದು ಕರೆದೊಯ್ಯುವ ಮೂಲಕ ಅಸಾಪ್ ಗಮನ ಸೆಳೆಯುತ್ತಿದ್ದು, ಕೋವಿಡ್ ಅವಧಿಯಲ್ಲಿ ನೂತನ ಪರಿಣತ ತರಬೇತಿಗಳನ್ನು ಮನೆಯಲ್ಲೇ ಇದ್ದುಕೊಂಡು ಕಲಿಯಲು ಅವಕಾಶಗಳಿವೆ. ಗ್ರಾಫಿಕ್ ಡಿಸೈನರ್, ಸೈಬರ್ ಸೆಕ್ಯೂರಿಟಿ, ಫುಲ್ ಸ್ಟಾಕ್ ಡೆವೆಲಪರ್ ಕೋರ್ಸ್, ಅಸಾಪ್ ಆಮಝೋನ್ ವೆಬ್ ಸರ್ವೀಸ್ ಅಕಾಡೆಮಿ ಕ್ಲೌಡ್ ಕಂಪ್ಯೂಟಿಂಗ್ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನಬಾರ್ಡ್, ಇನ್ನಿತರ ಸರ್ಕಾರಿ ಏಜೆನ್ಸಿಗಳು ಅಸಾಪ್ ಕೇರಳ ಸಂಸ್ಥೆಯೊಂದಿಗೆ ಕೈಜೋಡಿಸಿ ಅರ್ಹ ವಿದ್ಯಾರ್ಥಿಗಳಿಗೆ ಶೇ 75 ವರೆಗಿನ ಶುಲ್ಕ ಸಬ್ಸಿಡಿ ಒದಗಿಸಲಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸುವ ವಿದ್ಯಾರ್ಥಿಗಳಿಗೆ ನೌಕರಿ ಖಚಿತಪಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.