ಮಂಜೇಶ್ವರ: ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ಸಾಹಿತ್ಯ ಪರಿಚಾರಕ, ಸಂಘಟಕ, ಸಮಾಜ ಸೇವಕ ಪೈವಳಿಕೆಯ ರಾಘವ ಬಲ್ಲಾಳ್ ಅವರ ನಿಧನದ ವಾರ್ತೆ ತೀವ್ರ ವಿಷಾದವನ್ನುಂಟುಮಾಡಿದೆ ಎಂದು ಜಿಲ್ಲಾ ಕನ್ನಡ ಲೇಖಕರ ಸಂಘ ಹಾಗೂ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅ|ಧ್ಯಯನ ಕೇಂದ್ರದ ಅಧ್ಯಕ್ಷ ಡಾ.ರಮಾನಂದ ಬನಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತ್ಯ ಪರಿಷತ್ತಿನ ಗಡಿನಾಡ ಘಟಕದೊಂದಿಗೆ ನಿಕಟ ಸಂಪರ್ಕವಿದ್ದ ರಾಘವ ಬಲ್ಲಾಳರು ಗೌರವ ಕೋಶಾಧಿಕಾರಿಯಾಗಿಯೂ ತಾಲೂಕು ಘಟಕದ ಅಧ್ಯಕ್ಷರಾಗಿಯೂ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದವರು. ಸಂಸ್ಕøತಿ ಸಂಪನ್ನರು ವಿನಯಶೀಲ ವಿದ್ವಾಂಸರೂ ಆದ ಅವರ ಅಗಲುವಿಕೆಯಿಂದ ಕಾಸರಗೋಡು ಕನ್ನಡಿಗರ ಹೋರಾಟದ ಶಕ್ತಿಯೊಂದು ಕಳಚಿ ಬಿದ್ದಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಕುಟುಂಬದವರ ಮನಸ್ಸಿಗೆ ಪರಮಾತ್ಮನು ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಕಟಣೆ ತಿಳಿಸಿದೆ.