ನವದೆಹಲಿ: ಪ್ರತಿಪಕ್ಷಗಳ ಪ್ರತಿಭಟನೆಯ ಪರಿಣಾಮ ರಾಜ್ಯಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಪೆಗಾಸಸ್ ವಿವಾದ, ಕೃಷಿ ಮಸೂದೆಗಳ ವಿಷಯ ಹಾಗೂ ಬೆಲೆ ಏರಿಕೆಯ ವಿಷಯಗಳಲ್ಲಿ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ನಿರಂತರ ಪ್ರತಿಭಟನೆ ನಡೆಸಿದವು.
ಮಧ್ಯಾಹ್ನದ ಭೋಜನ ವಿರಾಮದ ನಂತರ 2:30 ಗೆ ಪ್ರಾರಂಭವಾದಲಾಪದಲ್ಲಿ ಸಭಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ರಾಜ್ಯಸಭಾ ಸದಸ್ಯರುಗಳಿಗೆ ಸಮಯ ನೀಡಲು ಮುಂದಾದರು.
ಇದಕ್ಕೂ ಮುನ್ನ ಸರ್ಕಾರ ಸೀಮಿತ ಹೊಣೆಗಾರಿಕೆ ಸಹಭಾಗಿತ್ವ (ತಿದ್ದುಪಡಿ) ಮಸೂದೆ, 2021 ಮತ್ತು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ, 2021ಯನ್ನು ಮಂಡಿಸಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಈ ನಡುವೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತೆಂಗು ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ ಪರಿಗಣಿಸುವ ನಿರ್ಣಯವನ್ನು ಮಂಡಿಸಿದರು.
ಮಸೂದೆ ಅಂಗೀಕಾರ ಹಾಗೂ ಕೃಷಿ ಸಚಿವರ ಭಾಷಣದ ನಡುವೆ ಪ್ರತಿಪಕ್ಷಗಳು ಪ್ರತುಭಟನೆ ನಡೆಸಿದ್ದರ ಪರಿಣಾಮ ಸಭೆಯನ್ನು ಸೋಮವಾರದ ಬೆಳಿಗ್ಗೆ 11 ಗಂಟೆ ವರೆಗೆ ಮುಂದೂಡಲಾಗಿದೆ.