ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿಯ ಐದನೇ ವಾರ್ಡ್ ಜಾಗ್ರತಾ ಸಮಿತಿಯ ನೇತೃತ್ವದಲ್ಲಿ ಶನಿವಾರ ಉಕ್ಕಿನಡ್ಕ ಚರ್ಚ್ ಸಭಾಂಗಣದಲ್ಲಿ ಕೋವಿಡ್ ತಪಾಸಣಾ ಶಿಬಿರ ಜರಗಿತು. ಆರೋಗ್ಯ ಇಲಾಖೆಯ ತಂಡ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 92 ಮಂದಿ ಈ ಶಿಬಿರದ ಸದುಪಯೋಗ ಪಡೆದುಕೊಂಡರು.
ಕೊರೋನಾ ಮೂರನೇ ಅಲೆಯ ಆರಂಭದ ಹಂತದಲ್ಲಿ ನಾವು ಅದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅತಿಯಾಗಿ ಜಾಗರೂಕತೆಯಿಂದ ಇರಬೇಕು ಎಂದು ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ದೇವಿದಾಕ್ಷನ್ ತಿಳಿಸಿದರು. ಈ ನಿಟ್ಟಿನಲ್ಲಿ ಅತಿ ಶೀಘ್ರದಲ್ಲಿ ಐದನೇ ವಾರ್ಡ್ ಮಟ್ಟದಲ್ಲಿ ಕೋವಿಡ್ ವಾಕ್ಸಿನೇಷನ್ ಕ್ಯಾಂಪ್ ಸಂಘಟಿಸುವುದಾಗಿ ತಿಳಿಸಿದರು. ಪೋಲಿಸ್ ಇಲಾಖೆ ಜನಜಾಗೃತಿ ಮಾಹಿತಿ ನೀಡಿದರು. ಉಕ್ಕಿನಡ್ಕ ಚರ್ಚ್ ನ ಧರ್ಮ ಗುರು ಫಾ.ವಿಲ್ಸನ್ ಲೋಬೊ ಉಪಸ್ಥಿತರಿದ್ದರು.
ವಾರ್ಡ್ ಸದಸ್ಯೆ ಜ್ಯೋತಿ ಕೆ, ಮಾಷ್ ಸಂಯೋಜಕ ಕೃಷ್ಣ ಪ್ರಸಾದ ಟಿ, ಆಶಾ ಕಾರ್ಯಕರ್ತೆ ಲಲಿತಾ, ಆರ್.ಆರ್.ಟಿ. ತಂಡ,ಜಾಗ್ರತಾ ಸಮಿತಿಯ ಸದಸ್ಯರು ಸಹಕರಿಸಿದರು.