ಕಾಸರಗೋಡು: ಇತರ ರಾಜ್ಯಗಳಲ್ಲಿ ಕಲಿಕೆ ನಡೆಸುವ 18 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಾಕ್ಸಿನೇಷನ್ ಜು.22,23,24ರಂದು ನೀಡುವುದಾಗಿ ಜಿಲಾ ವೈದ್ಯಾಧಿಕಾರಿ(ಆರೋಗ್ಯ) ತಿಳಿಸಿದರು.
ಜು.22ರಂದು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ(400 ಮಂದಿಗೆ), 23ರಂದು ತ್ರಿಕರಿಪುರ ತಾಲೂಕು ಆಸ್ಪತ್ರೆಯಲ್ಲಿ(200 ಮಂದಿಗೆ), 24ರಂದು ಕಾಞಂಗಾಡು ಜಿಲ್ಲಾ ಆಸ್ಪತ್ರೆಯಲ್ಲಿ(250 ಮಂದಿಗೆ), ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ(250 ಮಂದಿಗೆ) ಲಸಿಕೆ ನಿಡಲಾಗುವುದು. ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಮಟೆ ವರೆಗೆ ವಾಕ್ಸಿನೇಷನ್ ಒದಗಿಸಲಾಗುವುದು. ಪ್ರತಿ ಕೇಂದ್ರಗಳಲ್ಲಿ ಮಂಜೂರು ಮಾಡಲಾದ ವಾಕ್ಸೀನ್ ಅನುಸಾರ ಸ್ಪಾಟ್ ನೋಂದಣಿ ಇರುವುದು.
ಲಸಿಕೆ ಅಗತ್ಯವಿರುವ ವಿದ್ಯಾರ್ಥಿಗಳು ತಾವು ಕಲಿಕೆ ನಡೆಸುವ ಸಂಸ್ಥೆಗಳ ಐಡಿ ಕಾರ್ಡ್ ಆಯಾ ಕೇಂದ್ರಗಳಿಗೆ ಹಾಜರಾಗಬೇಕು. ಹೆಚ್ಚುವರಿ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು: 9061078026, 9061076590.