ಬದಿಯಡ್ಕ: ಪಿಡಿಪಿ ಕುಂಬ್ಡಾಜೆ ಘಟಕದ ನೇತೃತ್ವದಲ್ಲಿ ಈ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.
ಅಭಿನಂದನಾ ಸಭೆಯಲ್ಲಿ ಅಬ್ದುಲ್ಲ ಒಜಂತೋಡಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಪಿ ರಾಜ್ಯ ಕಾರ್ಯದರ್ಶಿ ಯೂನಸ್ ತಳಂಗರೆ ಅಭಿಂದಿಸಿ |ಶುಭಹಾರೈಸಿದರು. ಘಟಕದ ಕಾರ್ಯದರ್ಶಿ ಪೂಕೋಯಾ ತಂಙಳ್ ಸಭೆಯನ್ನು ಉದ್ಘಾಟಿಸಿದರು. ಪಿಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ವಿದ್ಯಾರ್ಥಿಗಳಿಗೆ ಉಡುಗೊರೆಗಳನ್ನು ನೀಡಿ ಗೌರವಿಸಿದರು. ವಿದ್ಯಾರ್ಥಿಗಳಾದ ಶಮ್ನಾ ಷರೀಫ್, ಮುಮ್ತಾಜ್ ಅಬ್ಬಾಸ್, ಜವಾಡಾ ಮೊಹಮ್ಮದ್, ಜೋಸ್ನಾ ಜೋಸೆಫ್, ಫಾತಿಮಾ ಶಹ್ಮಾ ಬಶೀರ್ ಮತ್ತು ಆಯಿಷತ್ ಅಸ್ಮಿನಾ ಅಶ್ರಫ್ ಅಭಿನಂದನೆ ಸ್ವೀಕರಿಸಿದರು. ಪಿಡಿಪಿ ಕುಂಬ್ಡಾಜೆ ಪಂಚಾಯತ್ ಅಧ್ಯಕ್ಷ ಮುತಾಲಿಬ್, ಜೋಮಿ ಕುಂಬ್ಡಾಜೆ, ಒಸಿ ಮಹಮ್ಮದ್, ಇಸ್ಮಾಯಿಲ್, ಶಮ್ಸು ಕುಂಬ್ಡಾಜೆ ಮತ್ತು ಅಬ್ದುಲ್ಲಾ ಮುನಿಯೂರ್ ಉಪಸ್ಥಿತರಿದ್ದರು.