ಟೋಕಿಯೊ: ಟೋಕಿಯೊ ಒಲಂಪಿಕ್ಸ್ 2020 ರ ಮಹಿಳಾ ವಿಭಾಗದ 69 ಕೆ.ಜಿ ವಿಭಾಗದಲ್ಲಿ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಪ್ರೀ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಜಯ ಸಾಧಿಸಿ, ಎಂಟರ ಹಂತ ತಲುಪಿದ್ದಾರೆ.
ಎರಡು ಬಾರಿ ವಿಶ್ವ ಚಾಂಪಿಯನ್ ಶಿಪ್ ಕಂಚಿನ ಪದಕ ವಿಜೇತ ಬೋರ್ಗೊಹೈನ್ 3-2 ಅಂತರದಿಂದ ಜರ್ಮನಿಯ ನಾಡಿನ್ ಅವರನ್ನು ಮಣಿಸಿದರು. ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ನಲ್ಲಿ ಲೋವ್ಲಿನಾ ಈಗ ಚೀನಾದ ತೈಪೆಯ ನಿಯಾನ್-ಚಿನ್ ಚೆನ್ ಅವರನ್ನು ಎದುರಿಸಲಿದ್ದಾರೆ.
ಮೊದಲ ಗೇಮ್ ನಲ್ಲಿ ಭಾರತದ ಆಟಗಾರ್ತಿ ನಿರಾಸೆ ಅನುಭವಿಸಿದರೂ, ನಂತರದ ಮೂರು ಸುತ್ತುಗಳಲ್ಲಿ ಲೊವ್ಲಿನಾ ಎದುರಾಳಿಗೆ ಭರ್ಜರಿ ಪಂಚ್ ನೀಡಿ ತೀರ್ಪುಗಾರರ ಮನ ಗೆಲ್ಲುವಲ್ಲಿ ಸಫಲರಾದರು. ಐದನೇ ಗೇಮ್ ನಲ್ಲಿ ಸೋತರೂ ಪಂದ್ಯ ಗೆದ್ದು ಬೀಗಿದರು.