ಕಾಸರಗೋಡು: "ಸಂಪುಷ್ಟ ಕೇರಳಂ" ಯೋಜನೆಯ ಅಂಗವಾಗಿ ಒಂದು ವರ್ಷವಿಡೀ ತರಕಾರಿ ಬೆಳೆಯುವ ಕಾರ್ಯಕ್ರಮ ಕಾಸರಗೋಡು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ.
ಮಹಿಳಾ-ಶಿಶು ಅಭಿವೃದ್ಧಿ ಇಲಾಖೆ ಮತ್ತು ಐ.ಸಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಕಚೇರಿಯ ನೇತೃತ್ವದಲ್ಲಿ ಇದು ಜರುಗುತ್ತಿದೆ. ಜೂನ್ ತಿಂಗಳಲ್ಲಿ ಆರಂಭಗೊಂಡಿದ್ದ ಈ ಕೃಷಿ ಪೋಷಣೆ ಕಾರ್ಯಕ್ರಮ 2022 ಮೇ ತಿಂಗಳ ವರೆಗೆ ಮುಂದುವರಿಯಲಿದೆ.
ಕಾಸರಗೋಡು ಜಿಲ್ಲೆಯ ಅಂಗನವಾಡಿಗಳು, ಮನೆಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಸಸಿ ನೆಟ್ಟು ತರಕಾರಿ ಬೆಳೆಯುವ ಕೃಷಿ ಇಲಾಖೆಯ ಅಭಿಯಾನ ಇದಾಗಿದೆ. ಎ.ಎಲ್.ಎಂ.ಎಸ್.ಸಿ., ನೌಕರಿ ಖಾತರಿ ಯೋಜನೆ, ಸಿ.ಪಿ.ಸಿ.ಆರ್.ಐ., ಕುಟುಂಬಶ್ರೀ, ವಿವಿಧ ಸಂಘಟನೆಗಳು, ಸ್ಥಲೀಯ ಕೃಷಿಕರ ಸಹಕಾರದೊಂದಿಗೆ ಈ ಕೃಷಿ ನಡೆಸಲಾಗುತ್ತಿದೆ. ಹವಾಮಾನ ಮತ್ತು ಮಣ್ಣನ್ನು ಹೊಂದಿಕೊಂಡು ಆಯಾ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ತರಕಾರಿಗಳನ್ನು ಬೆಳೆಯಲಾಗುತ್ತದೆ ಎಂದು ಮಹಿಳಾ-ಶಿಶು ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಕವಿತಾರಾಣಿ ರಂಜಿತ್ ತಿಳಿಸಿದರು.
ಜನವರಿ ತಿಂಗಳಲ್ಲಿ ಸೌತೆ, ಬದನೆ, ಟೊಮೆಟೋ, ಪಡುವಲ, ಕುಂಬಳ, ಹಾಗಲ, ಮೆಣಸು, ಅಲಸಂಡೆ, ಹರಿವೆ ಇತ್ಯಾದಿ, ಫೆಬ್ರವರಿ ತಿಂಗಳಲ್ಲಿ ಬದನೆ, ಟೊಮೆಟೋ, ಬೆಂಡೆ, ಅಲಸಂಡೆ, ಹರಿವೆ ಇತ್ಯಾದಿ, ಮಾರ್ಚ್ ತಿಂಗಳಲ್ಲಿ ಟೊಮೆಟೋ, ಬೆಂಡೆ, ಅಲಸಂಡೆ, ಹರಿವೆ ಇತ್ಯಾದಿ, ಏಪ್ರಿಲ್ ತಿಂಗಳಲ್ಲಿ ಸೌತೆ, ಹಾಗಲ, ಕುಂಬಳ, ಕಲ್ಲಂಗಡಿ, ಮೆಣಸು, ಅಲಸಂಡೆ, ಹರಿವೆ ಇತ್ಯಾದಿ, ಮೇ ತಿಂಗಳಲ್ಲಿ ನುಗ್ಗೆ, ಬದನೆ, ಮೆಣಸು, ಅಲಸಂಡೆ, ಸುವರ್ಣ ಗೆಡ್ಡೆ, ಹರಿವೆ ಇತ್ಯಾದಿ, ಜೂನ್ ತಿಂಗಳಲ್ಲಿ ಬದನೆ, ನುಗ್ಗೆ, ಬೆಂಡೆ, ಅಲಸಂಡೆ, ಇತ್ಯಾದಿ, ಜುಲೈ ತಿಂಗಳಲ್ಲಿ ಬೆಂಡೆ, ಅಲಸಂಡೆ, ಆಗಸ್ಟ್ ತಿಂಗಳಲ್ಲಿ ಮೆಣಸು, ಹರಿವೆ, ಅಲಸಂಡೆ ಇತ್ಯಾದಿ, ಸೆಪ್ಟೆಂಬರ್ ತಿಂಗಳಲ್ಲಿ ಸೌತೆ, ಬದನೆ, ಪಡುವಲ, ಟೊಮೆಟೋ, ಕುಂಬಳ, ಹಾಗಲ, ಕಲ್ಲಂಗಡಿ, ಅಲಸಂಡೆ, ಹರಿವೆ ಇತ್ಯಾದಿ, ಅಕ್ಟೋಬರ್ ತಿಂಗಳಲ್ಲಿ ಹೂಕೋಸು, ಕ್ಯಾಬೇಜ್, ಬದನೆ, ಟೊಮೆಟೋ, ಬೆಂಡೆ, ಅಲಸಂಡೆ, ಸುವರ್ಣ ಗೆಡ್ಡೆ, ಹರಿವೆ ಇತ್ಯಾದಿ, ನವೆಂಬರ್ ತಿಂಗಳಲ್ಲಿ ಹೂಕೋಸು, ಕ್ಯಾಬೇಜ್, ಬದನೆ, ಟೊಮೆಟೋ, ಬೆಂಡೆ, ಅಲಸಂಡೆ, ಸುವರ್ಣ ಗೆಡ್ಡೆ, ಹರಿವೆ ಇತ್ಯಾದಿ, ಡಿಸೆಂಬರ್ ತಿಂಗಳಲ್ಲಿ ಟೊಮೆಟೋ, ಮೆಣಸು, ಹರಿವೆ, ಅಲಸಂಡೆ ಇತ್ಯಾದಿ ತರಕಾರಿ ಬೆಳೆಯಲಾಗುವುದು.