ತಿರುವನಂತಪುರ: ಕೋವಿಡ್ ವ್ಯಾಪಕತೆ, ಚಿಕಿತ್ಸೆಯ ಹಿನ್ನೆಲೆಯಲ್ಲಿ ಅಂಗಾಂಗ ದಾನಗಳಂತಹ ತುರ್ತು ಚಿಕಿತ್ಸೆಗಳಿಗೆ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಅಂಗಾಂಗ ದಾನವನ್ನು ಅನುಮೋದಿಸುವ ಜಿಲ್ಲಾ ಮಟ್ಟದ ಅಧಿಕೃತ ಸಮಿತಿಯಲ್ಲಿ ಬದಲಾವಣೆ ಮಾಡಲು ಸರ್ಕಾರ ಆದೇಶಿಸಿದೆ.
ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಆಯಾ ವೈದ್ಯಕೀಯ ಕಾಲೇಜುಗಳ ಆಡಳಿತಾಧಿಕಾರಿಗಳನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಮನಿರ್ದೇಶಿತರಾಗಿ ನೇಮಿಸಲಾಗಿದೆ. ಅಂಗಾಂಗ ದಾನಕ್ಕೆ ಅನುಮೋದನೆ ನೀಡುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕೃತ ಸಮಿತಿಯು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಆಯಾ ವೈದ್ಯಕೀಯ ಕಾಲೇಜುಗಳಲ್ಲಿ ಜಿಲ್ಲಾ ಮಟ್ಟದ ಅಧಿಕೃತ ಸಮಿತಿ ಸಭೆ ಸೇರುತ್ತದೆ. ಇದು ತಜ್ಞ ಸದಸ್ಯರನ್ನು ಒಳಗೊಂಡ ಸಮಿತಿಯಾಗಿದೆ. ಈ ಸಮಿತಿಯನ್ನು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸರ್ಕಾರಿ ಪ್ರತಿನಿಧಿಯಾಗಿ ಪ್ರತಿನಿಧಿಸುತ್ತಾರೆ.
ಯಾವುದೇ ಜಿಲ್ಲೆಯಲ್ಲಿ ಈ ಅಧಿಕಾರಿ ಕಾರ್ಯನಿರ್ವಹಿಸಬಹುದಾಗಿದ್ದು, ಕೋವಿಡ್ ಪರಿಸ್ಥಿತಿಯಲ್ಲಿ ಗುಂಪು ಚಟಿವಟಿಕೆಗಳನ್ನು ಗಮನಿಸಿ, ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.