ವಾಷಿಂಗ್ಟನ್: ಜಾಗತಿಕ ಕನಿಷ್ಠ ತೆರಿಗೆ ಕುರಿತು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕ ಖಜಾನೆ ಕಾರ್ಯದರ್ಶಿ ಜಾನೆಟ್ ಎಲ್ ಯೆಲೆನ್ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಜಾನೆಟ್ ಎಲ್ ಯೆಲೆನ್ ಜಾಗತಿಕ ಕನಿಷ್ಠ ತೆರಿಗೆಯನ್ನು ಜಾರಿಗೆ ತರಲು ಸೀತಾರಾಮನ್ ಅವರ ಸಹಕಾರ ಕೋರಿದರು ಎಂದು ಖಜಾನೆ ಇಲಾಖೆ ತಿಳಿಸಿದೆ.
ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಜಿ-20, ಮತ್ತು ಒಇಸಿಡಿಯಲ್ಲಿ ಭಾರತದ ಸಹಭಾಗಿತ್ವದ ಮಹತ್ವವನ್ನು ಯೆಲೆನ್ ಒತ್ತಿ ಹೇಳಿದ್ದು, ಆರ್ಥಿಕತೆಯ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ತೆರಿಗೆ ವ್ಯವಸ್ಥೆ ಸಹಕಾರಿಯಾಗಲಿದೆ ಎನ್ನಲಾಗಿದೆ.