ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಇತ್ತೀಚೆಗೆ ಅಗಲಿದ ಮಹನೀಯರ ಸಂಸ್ಮರಣಾ ಕಾರ್ಯಕ್ರಮ ಕಸಾಪ ಕಾಸರಗೋಡು ಕಚೇರಿಯಲ್ಲಿ ಜರುಗಿತು. ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ಸಿ. ರಾಘವ ಬಲ್ಲಾಳ್, ಹಿರಿಯ ಸಂಸ್ಕøತ ವಿಧ್ವಾಂಸ ಪಿ.ರಾಜಗೋಪಾಲ ಪುಣಿಂಚಿತ್ತಾಯ, ಮಕ್ಕಳ ತಜ್ಞ ಡಾ. ಪಿ.ಎಸ್. ನರಸಿಂಹ ಭಟ್, ಆರೆಸ್ಸೆಸ್ ಹಿರಿಯ ಮುಖಂಡ, ವ್ಯಾಪಾರಿ ಸುಜೀರ್ ಶೇಷಗಿರಿ ನಾಯಕ್ ಅವರಿಗೆ ಸಂತಾಪ ಸೂಚಿಸಲಾಯಿತು.
ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವೈ. ಸತ್ಯನಾರಾಯಣ, ನಿವೃತ್ತ ಮುಖ್ಯ ಶಿಕ್ಷಕ ಸತೀಶ್ ಕೂಡ್ಲು, ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ, ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ಗಣೇಶ್ ಪ್ರಸಾದ್ ಪಾಣಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.