ಜೆರುಸಲೆಮ್: ಎನ್‌ಎಸ್‌ಒ ಗ್ರೂಪ್‌ನ ವಿವಾದಾತ್ಮಕ ಪೆಗಾಸಸ್ ಮೊಬೈಲ್ ಬೇಹುಗಾರಿಕೆ ಸಾಫ್ಟ್‌ವೇರ್ ದುರುಪಯೋಗವಾಗಿದೆ ಎಂಬ ಆರೋಪಗಳನ್ನು ಪರಿಶೀಲಿಸಲು ಇಸ್ರೇಲ್ ಆಯೋಗವನ್ನು ನೇಮಿಸಿದೆ ಎಂದು ಸಂಸತ್ತಿನ ವಿದೇಶಾಂಗ ಮತ್ತು ರಕ್ಷಣಾ ಸಮಿತಿಯ ಮುಖ್ಯಸ್ಥರು ತಿಳಿಸಿದ್ದಾರೆ.
'ರಕ್ಷಣಾಗೆ ಸೇರಿದ ಹಲವಾರು ಗುಂಪುಗಳನ್ನು ಒಳಗೊಂಡ ವಿಮರ್ಶೆ ಆಯೋಗವನ್ನು ನೇಮಿಸಲಾಗಿದೆ' ಎಂದು ಶಾಸಕ ರಾಮ್ ಬೆನ್ ಬರಾಕ್ ಆರ್ಮಿ ರೇಡಿಯೊಗೆ ತಿಳಿಸಿದರು.
ಆಯೋಗ ತಮ್ಮ ವಿಮರ್ಶೆಯನ್ನು ಪೂರ್ಣಗೊಳಿಸಿದ ನಂತರ ನಾವು ಫಲಿತಾಂಶಗಳನ್ನು ನೋಡಲು ಒತ್ತಾಯಿಸುತ್ತೇವೆ. ನಾವು ತಿದ್ದುಪಡಿಗಳನ್ನು ಮಾಡಬೇಕೇ ಎಂದು ನಿರ್ಣಯಿಸುತ್ತೇವೆ ಎಂದು ಇಸ್ರೇಲ್‌ನ ಮೊಸಾದ್ ಪತ್ತೇದಾರಿ ಏಜೆನ್ಸಿಯ ಮಾಜಿ ಉಪ ಮುಖ್ಯಸ್ಥರು ಹೇಳಿದರು.
ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ದೇಶದ 14 ಮುಖ್ಯಸ್ಥರ ಮೇಲೆ ಸಾಮೂಹಿಕ ಬೇಹುಗಾರಿಕೆ ಪೆಗಾಸಸ್ ಅನ್ನು ಸೂಚಿಸಲಾಗಿದೆ.
ಅಮ್ನೆಸ್ಟಿ ಇಂಟರ್ನ್ಯಾಷನಲ್ ಮತ್ತು ಫ್ರೆಂಚ್ ಮಾಧ್ಯಮ ಫರ್ಬಿಡನ್ ಸ್ಟೋರೀಸ್ ನಿಂದ ಸೋರಿಕೆಯಾದ ಪೆಗಾಸಸ್ ಸ್ಪೈವೇರ್ ಡೇಟಾಬೇಸ್ ನ ಭಾಗವಾಗಿದೆ. ಅದರಲ್ಲಿ ಸುಮಾರು 50,000 ಫೋನ್ ಸಂಖ್ಯೆಗಳು ಸಂಭಾವ್ಯ ಬೇಹುಗಾರಿಕೆಗೆ ಗುರಿಯಾಗಿವೆ ಎಂದು ಹೇಳಲಾಗಿದೆ.
ಸೋರಿಕೆಯಾಗಿರುವ ದತ್ತಾಂಶ 'ಪೆಗಾಸಸ್‌ನ ಟಾರ್ಗೆಟ್ ಅಥವಾ ಸಂಭಾವ್ಯ ಟಾರ್ಗೆಟ್ ಪಟ್ಟಿಯಲ್ಲ ಎಂದು ಎನ್‌ಎಸ್‌ಒ ಹೇಳಿದೆ.