ಕಾಸರಗೋಡು: ಕೃಷಿ ಮೌಲ್ಯವರ್ಧಿತ ಉದ್ದಿಮೆ ತರಬೇತಿಯ ಮೊದಲ ಹಂತ ಪೂರ್ಣಗೊಂಡಿದೆ. ಆನ್ ಲೈನ್ ರೂಪದಲ್ಲಿ ನಡೆದ ಸಮಾರಂಭದಲ್ಲಿ ಕೈಗಾರಿಕಾ ಖಾತೆ ಸಚಿವ ಪಿ.ರಾಜೀವ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಸರಕಾರದ 100 ದಿನಗಳ ಕಾರ್ಯಕ್ರಮ ಅಂಗವಾಗಿ ಕೇರಳ ಇನ್ಸ್ ಸ್ಟಿಟ್ಯೂಟ್ ಆಫ್ ಎಂಟರ್ ಪ್ರಿನರ್ ಶಿಪ್ ಡೆವೆಲಪ್‍ಮೆಂಟ್ ವತಿಯಿಂದ ಕೈಗಾರಿಕಾ ಇಲಾಖೆ ಜಾರಿಗೊಳಿಸುವ ಅರೈಸ್ ಯೋಜನೆ ಅಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಈ ತರಬೇತಿ ಜರುಗಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನಕಾರ್ಯದರ್ಶಿ ಡಾ.ಕೆ.ಇಳಂಗೋವನ್ ಪ್ರಧಾನ ಭಾಷಣ ಮಾಡಿದರು. ಪರಿಣತರಾದ ಅಭಿಲಾಷ್ ಶಶಿಧರನ್, ಡಾ.ಪಿ.ನಿಷಾ, ರಘು ಬಿ.ನಾರಾಯಣನ್ ಉಪಸ್ಥಿತರಿದ್ದರು. ಕೇರಳ ಇನ್ಸ್ ಸ್ಟಿಟ್ಯೂಟ್ ಆಫ್ ಎಂಟರ್ ಪ್ರಮನರ್ ಶಿಪ್ ಡೆವೆಲಪ್ ಮೆಂಟ್ ನ
ಸಿ.ಇ.ಒ. ಶರತ್ ವಿ.ರಾಜ್ ಸ್ವಾಗತಿಸಿದರು. ಜಿಲ್ಲಾ ಉದ್ದಿಮೆ ಕೇಂದ್ರ ಪ್ರಧಾನ ಪ್ರಬಂಧಕ ಸಜಿತ್ ಕುಮಾರ್ ವಂದಿಸಿದರು.