ತಿರುವನಂತಪುರ: ಕೊರೋನಾ ಸಾವಿನ ಪ್ರಮಾಣವನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಮರೆಮಾಚುತ್ತಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಹಿಂದಿನ ಸಾವುಗಳನ್ನು ವರದಿ ಮಾಡುವಲ್ಲಿನ ವಿಳಂಬವು ಪಾರದರ್ಶಕತೆಯನ್ನು ಖಾತರಿಪಡಿಸುವ ಭಾಗವಾಗಿತ್ತು. ಸುಪ್ರೀಂಕೋರ್ಟ್‍ನ ನಿರ್ದೇಶನದಂತೆ ಈ ವಿಷಯದಲ್ಲಿ ಗರಿಷ್ಠ ಪಾರದರ್ಶಕತೆ ಕಾಪಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದರು. ಕೊರೋನಾ ಸಾವಿನ ಸಂಖ್ಯೆಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಈ ವಿವರಣೆಯನ್ನು ಮಂಡಿಸಿದರು.
ಚಿಕಿತ್ಸೆ ನೀಡಿರುವ ವೈದ್ಯರೇ ಸ್ವತಃ ಸಾವಿನ ಕಾರಣಗಳ ಅಂತಿಮ ವರದಿ ನೀಡುತ್ತಾರೆ. ಐಸಿಎಂಆರ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕುಟುಂಬಗಳಿಗೆ ಗೌಪ್ಯತೆ ಸಮಸ್ಯೆ ಇಲ್ಲದಿದ್ದರೆ ಮೃತಪಟ್ಟವರ ಹೆಸರನ್ನು ಮರು ಪ್ರಕಟಿಸಬಹುದು ಮತ್ತು ಕೊರೋನಾ ಸಾವಿನ ಬಗ್ಗೆ ಇದುವರೆಗೂ ಯಾವುದೇ ವ್ಯಾಪಕ ದೂರುಗಳು ಬಂದಿಲ್ಲ ಎಂದು ಸಚಿವರು ವಿವರಿಸಿದರು.
ಕೊರೋನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಆರು ವಾರಗಳಲ್ಲಿ ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ನಿರ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕೇರಳದಲ್ಲಿ ಕೊÀರೋನಾ ಸಾವಿನ ಸಂಖ್ಯೆಯಲ್ಲಿ ವ್ಯಾಪಕ ಅಕ್ರಮಗಳ ಆರೋಪಗಳು ಕೇಳಿಬರುತ್ತಿವೆ. ಈ ಹಿಂದೆ ಕೇರಳದಲ್ಲಿ ನಿಖರವಾದ ಕೊರೋನಾ ಸಾವುಗಳನ್ನು ಮರೆಮಾಡಲಾಗಿದೆ ಎಂಬ ಟೀಕೆಗಳು ಕೇಳಿಬಂದವು. ಈ ನಿಟ್ಟಿನಲ್ಲಿ ದೂರುಗಳು ಸಹ ಬಂದಿವೆ ಎಂದು ತಿಳಿದುಬಂದಿದೆ. ಆದರೆ ಇದನ್ನೆಲ್ಲ ಸಮರ್ಥಿಸುತ್ತಾ ಆರೋಗ್ಯ ಸಚಿವರು ಹೇಳಿಕೆ ನೀಡಿರುವುದು ಪರಿಸ್ಥಿತಿ ಬಿಡಗಾಯಿಸುವ ಸೂಚನೆ ನೀಡಿದೆ.