ಕಾಞಂಗಾಡ್: ಕೆ.ಎಸ್.ಆರ್.ಟಿ.ಸಿ. ಬಸ್ ಹಾೂ ಇನ್ನೋವಾ ಕಾರು ಪರಸ್ಪರ ಡಿಕ್ಕಿಯಾಗಿ ನಡೆದ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ. ಸೋಮವಾರ ರಾತ್ರಿ 8 ಗಂಟೆಗೆ ಕಾಞಂಗಾಡ್ ಸೌತ್ ನಲ್ಲಿ ಈ ಅಪಘಾತ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕುಂಬಳೆ ಆರಿಕ್ಕಾಡಿಯ ದಿ. ಅಬ್ದುಲ್ಲಾ ಮತ್ತು ಮರಿಯಮ್ಮ ಅವರ ಪುತ್ರ ಅಲಿ (30) ಎಂದು ಗುರುತಿಸಲಾಗಿದೆ. ಅವರ ಸಂಬಂಧಿ ಕೊಡ್ಯಮೆಯ ಸಿದ್ದೀಕ್ (28) ಅವರನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರಲ್ಲಿ, ಬಸ್ ಪ್ರಯಾಣಿಕರಾದ ಸುರೇಂದ್ರನ್, ಶಫಾನಾ, ನಿಶಾನಾ, ರಶೀದಾ ಮತ್ತು ಫರ್ಸಾನಾ ಒಳಗೊಂಡಿದ್ದು, ಅವರನ್ನು ಕಾಞಂಗಾಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣೂರಿನಲ್ಲಿರುವ ಅಲಿಯ ಸಹೋದರಿಯ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರು ಅತಿ ವೇಗದಲ್ಲಿತ್ತು ಮತ್ತು ಅಪಘಾತ ತಪ್ಪಿಸಲು ಬಸ್ ನ್ನು ಒಂದು ಬದಿಗೆ ಸರಿಸಿದ ಕಾರಣ ಘಟನೆಗೆ ಕಾರಣವಾಯಿತು ಎನ್ನಲಾಗಿದೆ.