ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹರಡುವಿಕೆ ಇನ್ನೂ ಕಡಿಮೆಯಾಗಿಲ್ಲ. ಈ ಕಾರಣದಿಂದ ಸಾರ್ವಜನಿಕರು ಅತೀವ ಜಾಗರೂಕತೆ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಕೆ.ಆರ್.ರಾಜನ್ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ಮನಗಂಡು ಕೋವಿಡ್ ತಪಾಸಣೆ ಹೆಚ್ಚಳಗೊಳಿಸಲಾಗಿದೆ. ಕೋವಿಡ್ ಲಕ್ಷಣ ಹೊಂದಿರುವವರು, ರೋಗಿಗಳ ಪ್ರಾಥಮಿಕ ಸಂಪರ್ಕ ಹೊಂದಿರುವವರು ಮೊದಲಾದವರು ತಪಾಸಣೆಗೆ ಒಳಗಾಗಬೇಕು. ಜೊತೆಗೆ ಸಾರ್ವಜನಿಕರೊಂದಿಗೆ ಅತ್ಯಧಿಕ ಪ್ರಮಾಣದಲ್ಲಿ ಸಂಪರ್ಕ ಹೊಂದಿರುವ ಕಾರ್ಮಿಕರು, ಸರಕಾರಿ-ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ವ್ಯಾಪಾರಿಗಳು, ಆಟೋ-ಟಾಕ್ಸಿ ಚಾಲಕರು, ಬಸ್ ಸಿಬ್ಬಂದಿ, 25ಕ್ಕಿಂತ ಅಧಿಕ ಮಂದಿ ನೌಕರಿ ನಡೆಸುತ್ತಿರುವ ಸಂಸ್ಥೆಗಳ ಸಿಬ್ಬಂದಿ ತಿಂಗಳಿಗೊಮ್ಮೆ ತಪಾಸಣೆಗೆ ಒಳಗಾಗಬೇಕು. ಈ ಮೇಲೆ ತಿಳಿಸಲಾದ ಮಂದಿ ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂಬ ಬಗ್ಗೆ ಪಂಚಾಯತ್ ಮಟ್ಟದ ಜಾಗೃತಿ ಸಮಿತಿಗಳು, ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು ಖಚಿತಪಡಿಸುವಂತೆ ಅವರು ಕರೆನೀಡಿರುವರು.