ತಿರುವನಂತಪುರ: ಸಂಸದ, ಚಿತ್ರನಟ ಸುರೇಶ್ ಗೋಪಿ ಅವರು ತೆಂಗು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ರಾಜ್ಯಸಭೆಯಿಂದ ಅವಿರೋಧವಾಗಿ ಆಯ್ಕೆಯಾದರು. ಸುರೇಶ್ ಗೋಪಿ ಅವರು ತಮ್ಮ ಹೊಸ ಕರ್ತವ್ಯವನ್ನು ಜವಾಬ್ದಾರಿಯುತರಾಗಿ ನಿರ್ವಹಿಸುವುದಾಗಿ ತಿಳಿಸಿರುವರು.
ಅವರು ಫೇಸ್ ಬುಕ್ ಪೋಸ್ಟ್ ಮೂಲಕ ಆಯ್ಕೆಯನ್ನು ಘೋಷಿಸಿದರು. ಕೇರಳದ ತೆಂಗು ಕೃಷಿ ಸಂರಕ್ಷಿಸಲು ಸರಿಯಾದ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ತೆಂಗು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಸುರೇಶ್ ಗೋಪಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅಭಿನಂದಿಸಿದರು. ಸುರೇಶ್ ಗೋಪಿಯವರ ನೇಮಕಾತಿಯು ಕೇರಳದ ತೆಂಗು ರೈತರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ತೆಂಗು ಅಭಿವೃದ್ಧಿ ಮಂಡಳಿಯು ಕೇಂದ್ರ ಕೃಷಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತೆಂಗಿನ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ತೆಂಗಿನ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸಲು ಮಂಡಳಿಯನ್ನು ರಚಿಸಲಾಗಿದೆ.