ಕಾಸರಗೋಡು: ಕರ್ನಾಟಕದಲ್ಲಿ ವಿವಿಧ ಪರೀಕ್ಷೆ ಗಳಿಗೆ ಹಾಜರಾಗುವವರಿಗೆ ಇಂದು(ಜು.7ರಂದು) ವಾಕ್ಸಿನೇಷನ್ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.
ಕರ್ನಾಟಕದ ವಿವಿಧ ಕೋರ್ಸ್ ಗಳಿಗೆ ಸಂಬಂಧಿಸಿ ಪರೀಕ್ಷೆಗೆ ಹಾಜರಾಗುವವರಿಗೆ ಲಸಿಕೆ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಅಲ್ಲಿ ಪರೀಕ್ಷೆಗೆ ಹಾಜರಾಗುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ವಾಕ್ಸಿನ್ ನೀಡಿಕೆಗೆ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ. ಹೊಸಂಗಡಿ ವ್ಯಾಪಾರಿ ಭವನ, ಕಾಞಂಗಾಡು ಬಲ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಲಸಿಕೆ ನೀಡಿಕೆ ಸೌಲಭ್ಯ ಏರ್ಪಡಿಸಲಾಗಿದೆ. ಪ್ರತಿ ಕೇಂದ್ರಗಳಲ್ಲಿ ಸ್ಪಾಟ್ ಅಡ್ಮಿಷನ್ ಲಭಿಸುವ ಮೊದಲ ತಲಾ 300 ಮಂದಿಗೆ ವಾಕ್ಸಿನ್ ಲಭಿಸಲಿದೆ. ಜಿಲ್ಲೆಗೆ ಅಗತ್ಯವಿರುವಷ್ಟು ವಾಕ್ಸಿನ್ ಲಭಿಸಿದ ತಕ್ಷಣ ಇತರ ಆರೋಗ್ಯ ಕೇಂದ್ರಗಳಲ್ಲೂ ವಾಕ್ಸಿನೇಷನ್ ಸೌಲಭ್ಯ ಏರ್ಪಡಿಸಲಾಗುವುದು ಎಂದವರು ನುಡಿದರು.