ಮುಳ್ಳೇರಿಯ: ಮುಳ್ಳೇರಿಯ ಲಯನ್ಸ್ ಕ್ಲಬ್ ವತಿಯಿಂದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರುವ ರೋಗಿಗಳು ಮತ್ತು ಸಹೋದ್ಯೋಗಿಗಳಿಗೆ ಉಪಾಹಾರ ಕೂಟವನ್ನು ಆಯೋಜಿಸಿತ್ತು.
ಲಯನ್ಸ್ ಅಂತಾರಾಷ್ಟ್ರೀಯ ಹಸಿವು ಪರಿಹಾರ ಮಿಷನ್‍ನ ಭಾಗವಾಗಿ ಆಯೋಜಿಸಲಾಗಿತ್ತು.
ಲಯನ್ಸ್ ಜಿಲ್ಲಾ ಗವರ್ನರ್ ಯೋಹನನ್ ಮಟತ್ತಿಲ್ ಉದ್ಘಾಟಿಸಿದರು. ಮುಳ್ಳೇರಿಯ ಲಯನ್ಸ್ ಕ್ಲಬ್ ನ ಸೇವಾ ಚಟುವಟಿಕೆಗಳ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಕ್ಲಬ್ ಅಧ್ಯಕ್ಷ ವಿನೋದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಕ್ಯಾಬಿನೆಟ್ ಕಾರ್ಯದರ್ಶಿ ನ್ಯಾಯವಾದಿ. ಕೆ ವಿನೋದ್ ಕುಮಾರ್, ವಲಯ ಅಧ್ಯಕ್ಷ ಸುಕುಮಾರನ್, ಕ್ಲಬ್
ಕಾರ್ಯದರ್ಶಿ ಕೆ ರಾಜಲಕ್ಷ್ಮಿ ಟೀಚರ್, ಪದಾಧಿಕಾರಿಗಳಾದ ಮೋಹನನ್ ಮೇಲತ್À, ಶೇಖರನ್ ನಾಯರ್, ಇ ವೇಣುಗೋಪಾಲನ್, ಕೃಷ್ಣನ್ ಕೋಳಿಕ್ಕಾಲ್, ಮೋಹನನ್ ಕರಿಚೇರಿ, ಪ್ರಜಿತಾ ವಿನೋದ್ ಮತ್ತು ನವ್ಯಾ ಮೋಹನ್ ನೇತೃತ್ವ ವಹಿಸಿದ್ದರು.