ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್ ಇಂಟರ್ನ್ ಶಿಪ್ ಪೆÇ್ರೀಗ್ರಾಂ ಸೋಮವಾರ ಉದ್ಘಾಟನೆಗೊಂಡಿದೆ.
ಕೋವಿಡ್ ಸೋಂಕಿನ ದ್ವಿತೀಯ ಅಲೆಯೂ ಗಂಭೀರ ಸ್ಥಿತಿಯಲ್ಲಿ ಹರಡಿದ ಪರಿಣಾಮ ಯುದ್ಧಕಾಲ ಹಿನ್ನೆಲೆಯಲ್ಲಿ ಪೂರ್ಣಗೊಳಿಸಬೇಕಾದ ಮತ್ತು ನೂತನವಾಗಿ ರಚಿಸಲಾದ ಯೋಜನೆಗಳನ್ನು ಏಕೀಕೃತಗೊಳಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾ ಪಂಚಾಯತ್ ಇಂಟರ್ನ್ ಶಿಪ್ ಪೆÇ್ರೀಗ್ರಾಂಗೆ ರೂಪು ನೀಡಿದೆ.
ಜಿಲ್ಲಾ ಪಂಚಾಯತ್ನ ಎನ್.ಪಿ.ಆರ್.ಪಿ.ಡಿ.ಪಿ. ಬ್ಲೋಕ್ ನಲ್ಲಿ ಸೋಮವಾರ ಜರುಗಿದ ಸಮಾರಂಭದಲ್ಲಿ ಸ್ಥಳೀಯಾಡಳಿತ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಉದ್ಘಾಟಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು ತಳಿಪ್ಪರಂಬ ಕಿಲಾ ವಿಸ್ತರಣೆ ಕೇಂದ್ರವನ್ನು ಉನ್ನತ ಗುಣಮಟ್ಟದ ಇಂಜಿನಿಯರಿಂಗ್ ಸಂಸ್ಥೆಯಾಗಿ ಬಡ್ತಿಗೊಳಿಸಲಾಗುವುದು ಎಂದು ತಿಳಿಸಿದರು. ಸ್ಥಳಿಯಾಡಳಿತೆ ಸಂಸ್ಥೆಗಳು ಆರೋಗ್ಯ ಸಂರಕ್ಷಣೆ, ಸಾಮಾಜಿಕ ಸುರಕ್ಷೆ, ಮೂಲಭೂತ ಸೌಲಭ್ಯ ವಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಆದೇಶಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಜಿಲ್ಲಾ ಪಂಚಾಯತ್ ಸದಸ್ಯರು, ಇಂಟರ್ನ್ ಶಿಪ್ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರ ಯುವಜನ ಕ್ರೀಡಾ ಮಂತ್ರಾಲಯ ವ್ಯಾಪ್ತಿಯಲ್ಲಿ ಚೆನೈ ಯ ಶ್ರೀ ಪೆರುಂಬತ್ತೂರಿನ ರಾಜೀವಗಾಂಧಿ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಯೂತ್ ಡೆವೆಲಪ್ ಮೆಂಟ್ ನ ಹಳೆ ವಿದ್ಯಾರ್ಥಿಗಳು ರಚಿಸಿರುವ ವೈಬ್ರೆಟಿ ಕಮ್ಯೂನಿಟಿ ಆಕ್ಷನ್ ನೆಟ್ ವರ್ಕ್ ( ವಿ.ಸಿ.ಎ.ಎನ್.) ಸೋಷಲ್ ಇಂಜಿನಿಯರಿಂಗ್ ಒಕ್ಕೂಟದೊಂದಿಗೆ ಸೇರಿ ಇಂಟರ್ನ್ ಶಿಪ್ ಆರಂಭಿಸುತ್ತಿದೆ.
ಅಭಿವೃದ್ಧಿ ನೀತಿ ರಚನೆ ಸಂಬಂಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಮಂದಿ ಸಹಿತ ಈ ಒಕ್ಕೂಟದಲ್ಲಿ ಕಮ್ಯೂನಿಟಿ ಡೆವೆಲಪ್ ಮೆಂಟ್, ಸೋಷಲ್ ವರ್ಕ್, ಕಾನ್ ಸಿಸ್ಟೆನ್ಸಿ ಮೆನೆಜ್ ಮೆಂಟ್, ಲೋಕಲ್ ಗವರ್ನೆನ್ಸ್, ಕೌನ್ಸಲಿಂಗ್ ಸೈಕಾಲಜಿ, ಜೆಂಡರ್ ಸ್ಟಿಡೀಸ್, ಗ್ರಾ-ನಗರ ಯೋಜನೆ, ಪಿಡುಗು ನಿವಾರಣೆ ಸಹಿತ ವಲಯಗಳಲ್ಲಿ ಚಟುವಟಿಕೆ ನಡೆಸುವ ಸೋಷಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ.
ಜಿಲ್ಲಾ ಪಂಚಾಯತ್ ನ ನೂತನ ಯೋಜನೆಗಳನ್ನು ರಚಿಸಲು, ಸದ್ರಿ ಯೋಜನೆಗಳ ನಿರ್ವಹಣೆ ಗೆ ಸಹಾಯ ಒದಗಿಸಲು ಇಂಟರ್ನ್ ಶಿಪ್ ಆದ್ಯತೆ ನೀಡಲಿದೆ. ಸದ್ರಿ ರಾಜೀವ ಗಾಂಧಿ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಯೂತ್ ಡೆವೆಲಪ್ ಮೆಂಟ್ , ಅಸೀಂ ಪ್ರೇಂಜಿ ವಿವಿ, ವಿವಿಧ ಕೇಂದ್ರ ವಿವಿಗಳು ಇತ್ಯಾದಿಗಳ 15 ಮಂದಿ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ನಲ್ಲಿ ಭಾಗವಹಿಸುತ್ತಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದವರಾದ ಕಾರಣ ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಅವರಿಗೆ ವಸತಿ, ಇನ್ನಿತರ ಸೌಲಭ್ಯಗಳನ್ನು ಜಿಲ್ಲಾ ಪಂಚಾಯತ್ ಒದಗಿಸಲಿದೆ. ಜಿಲ್ಲಾ ಪಂಚಾಯತ್ ವತಿಯಿಂದ ನಡೆಸುವ, ವಿವಿಧ ಸಚಿವರು ಭಾಗವಹಿಸುವ ಕ್ಲಬ್ ಹೌಸ್ ಸಂವಾದಗಳಲ್ಲಿ ಮೂಡುವ ಅಭಿಪ್ರಾಯಗಳನ್ನು ಇಂಟರ್ನ್ ಸ್ ಗಳ ಸಹಾಯದಿಂದ ಯೋಜನೆಗಳಾಗಿ ರಚಿಸಲು ಜಿಲ್ಲಾ ಪಂಚಾಯತ್ ಉದ್ದೇಶಿಸಿದೆ.
ಈ ಸೌಲಭ್ಯದಲ್ಲಿ ಜಿಲ್ಲಾ ಪಂಚಾಯತ್ ಬಜೆಟ್ ನಲ್ಲಿ ತಿಳಿಸಲಾದ ಕಾಸರಗೋಡು ಎಂಟರ್ ಫಾರ್ ಡೆವೆಲಪ್ ಮೆಂಟ್ ಸ್ಟಡೀಸ್ ಸಂಸ್ಥೆ ಭವಿತವ್ಯದಲ್ಲಿ ಚಟುವಟಿಕೆ ಆರಂಭಿಸಲಿದೆ. ಯುವಜನ-ವಿದ್ಯಾರ್ಥಿ ವಲಯವನ್ನು ಸಾಮಾಜಿಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗಿಗಳಾಗಿಸಿ ಯೋಜನೆ ನಿರ್ವಹಣೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ರೀತಿಯ ಯೋಜನೆಗೆ ಜಿಲ್ಲಾ ಪಂಚಾಯತ್ ಚಾಲನೆ ನೀಡಿದೆ.
ಕೇಂದ್ರ ವಿವಿ, ಸಿ.ಪಿ.ಸಿ.ಆರ್.ಐ. ಸಹಿತ ಸಂಸ್ಥೆಗಳ, ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಗಸ್ಟ್ ತಿಂಗಳಲ್ಲಿ ಕಿಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ಇಂಟರ್ನ್ ಶಿಪ್ ಕಾರ್ಯಕ್ರಮ ನಡೆಸಲು ಜಿಲ್ಲಾ ಪಂಚಾಯತ್ ಯೋಜನೆ ರಚಿಸಿದೆ.