ಕಾಸರಗೋಡು: ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಆನ್ ಲೈನ್ ಶಿಕ್ಷಣ ಸೌಕರ್ಯಗಳಿಗೆ ವಿದ್ಯಾರ್ಥಿಗಳಿಗೆ ಶಾಲಾ ಸಿಬ್ಬಂದಿಗಳು ಕೊಡುಗೆಯಾಗಿ ನೀಡಿದ ಮೊಬೈಲ್ ಪೋನ್ ಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಶಾಲಾ ವಿದ್ಯಾರ್ಥಿಗಳಿಗೆ 20 ಸ್ಮಾರ್ಟ್‍ಪೋನ್‍ಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ಪ್ರಫುಲ್ಲಚಂದ್ರ ಅವರು ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ. ಧನ್ಯಾ ಅವರಿಗೆ ಹಸ್ತಾಂತರಿಸಿ ಚಾಲನೆ ನೀಡಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ಪಾಯಂ ಅಧ್ಯಕ್ಷತೆ ವಹಿಸಿದ್ದರು. ಎಸ್‍ಎಂಸಿ ಅಧ್ಯಕ್ಷ ಎಂ.ಎಸ್. ರಘುನಾಥ್, ಶಿಕ್ಷಕರಾದ ಎಂ.ವಿ.ವೇಣುಗೋಪಾಲನ್, ಎಚ್.ಪಿ. ಬಾಲಕೃಷ್ಣನ್ ಮತ್ತು ಸಿ.ಪ್ರಶಾಂತ್ ಮಾತನಾಡಿದರು. ಹಿರಿಯ ಶಿಕ್ಷಕ ಕೆ. ಅಶೋಕನ್ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಕೆ ಪುಷ್ಪರಾಜನ್ ವಂದಿಸಿದರು.