ನವದೆಹಲಿ: ಕೇಂದ್ರ ಸರ್ಕಾರವು 'ಸಹಕಾರದಿಂದ ಸಮೃದ್ಧಿ' ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಹೊಸ ಸಹಕಾರ ಸಚಿವಾಲಯವನ್ನು ರಚಿಸುವುದಕ್ಕೆ ಮುಂದಾಗಿದೆ. ಈ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸುವುದು, ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ.
ಕೇಂದ್ರ ಸರ್ಕಾರದ ಈ ಸಹಕಾರಿ ಸಚಿವಾಲಯವು ನಿಜವಾಗಿ ಚಳವಳಿಯಲ್ಲಿ ತೊಡಗಿರುವ ಜನರಿಗೆ ನೆರವಾಗುವುದಕ್ಕೆ ಸಹಕಾರಿಯಾಗಲಿದೆ. ಇದರ ಜೊತೆಗೆ ಈ ಸಚಿವಾಲಯವು ಸಹಕಾರಿ ಸಂಸ್ಥೆಗಳಿಗೆ 'ವ್ಯವಹಾರವನ್ನು ಸುಲಭಗೊಳಿಸುವ' ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹು-ರಾಜ್ಯ ಸಹಕಾರ ಸಂಘಗಳ (ಎಂಎಸ್‌ಸಿಎಸ್) ಅಭಿವೃದ್ಧಿಯನ್ನು ಶಕ್ತಗೊಳಿಸುತ್ತದೆ.
ದೇಶದಲ್ಲಿ ಸಮುದಾಯ ಆಧಾರಿತ ಅಭಿವೃದ್ಧಿಯ ಸಹಭಾಗಿತ್ವಕ್ಕೆ ಕೇಂದ್ರ ಸರ್ಕಾರವು ತನ್ನ ಬದ್ಧತೆಯನ್ನು ತೋರಿಸಿದೆ. ಸಹಕಾರಿ ಸಚಿವಾಲಯದ ರಚನೆಯು ಕೇಂದ್ರ ಸರ್ಕಾರದ ಈ ಬದ್ಧತೆಗೆ ಹಿಡಿದ ಕೈಗನ್ನಡಿ ಆಗದೆ.