ಕಾಸರಗೋಡು: ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರ ಬನಾರಿ ನೇತೃತ್ವದಲ್ಲಿ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ `ಭಾರತೀಶ್ರೀಗಳ ಚಾತುರ್ಮಾಸ್ಯ ವ್ರತಾಚರಣ ಸಮಿತಿ ಸಹಯೋಗದಲ್ಲಿ ಡಾ.ರಮಾನಂದ ಬನಾರಿ ಬರೆದಿರುವ ಸಾನ್ನಿಧ್ಯ ಮತ್ತು ಭಗವದ್ಗೀತೆ ನಾನು ಕಂಡಂತೆ ಹಾಗೂ ನದಿ ಹರಿಯುತ್ತಲೇ ಇದೆ ಕವನ ಸಂಕಲನ ಕೃತಿಗಳ ಬಿಡುಗಡೆ ಸಮಾರಂಭ ಇಂದು(ಜು.31) ಸಂಜೆ 4ಕ್ಕೆ ಶ್ರೀಮದ್ ಎಡನೀರು ಮಠದಲ್ಲಿ ನಡೆಯಲಿದೆ.
ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸುವರು. ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಕೃತಿಗಳನ್ನು ಬಿಡುಗಡೆಗೊಳಿಸುವರು. ಬೆಂಗಳೂರಿನ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಉಪಸ್ಥಿತರಿದ್ದು ಕ್ಯೆಜೋಡಿಸುವರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಹಾಗೂ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿಗಳ ಪರಿಚಯ ನಡೆಸುವರು. ಕೃತಿಕಾರ ಡಾ.ರಮಾನಂದ ಬನಾರಿ ಉಪಸ್ಥಿತರಿರುವರು.
`