HEALTH TIPS

ಪತ್ರಿಕಾ ದಿನಾಚರಣೆ: ಕಾಸರಗೋಡು ಜಿಲ್ಲಾ ಸಂಘಟನೆಗೆ ನೆರವು ನೀಡಲು ಕರ್ನಾಟಕ ಸಿ.ಎಂ.ಗೆ ಮನವಿ

  

               ಕುಂಬಳೆ: ಕನ್ನಡ ಪತ್ರಿಕಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ದಿನಾಚರಣೆಯ ಅಂಗವಾಗಿ ಆನ್ ಲೈನ್ ಮೂಲಕ ನಡೆದ ಸಮಾರಂಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿvರಿದ್ದು ಮಾತನಾಡಿದರು.

          ಈ ಸಂದರ್ಭ ಅವರೊಂದಿಗೆ ನಡೆದ ಸಂವಾದದಲ್ಲಿ ಕಾಸರಗೋಡು ಜಿಲ್ಲಾ ಕಾರ್ಯನಿರತ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅವರು, ಗಡಿನಾಡು ಕಾಸರಗೋಡಿನ ಕನ್ನಡ ಪತ್ರಕರ್ತರಿಗೆ ಕನ್ನಡ ಮಾಧ್ಯಮ ಪಟ್ಟಿಯಲ್ಲಿ ವಿಶೇಷ ಮಾನದಂಡದಡಿ ಸ್ಥಾನ ನೀಡಬೇಕು ಎಂದು ವಿನಂತಿಸಿದರು. ಈ ಮೂಲಕ ಪಿಂಚಣಿ ಸಹಿತ ಎಲ್ಲಾ  ಸೌಲಭ್ಯಗಳನ್ನು ಅನೇಕ ವರ್ಷಗಳಿಂದ ವಂಚಿತರಾದ ಇಲ್ಲಿಯ ಪತ್ರಕರ್ತರಿಗೆ ಒದಗಿಸುವಲ್ಲಿ ಸಹಕಾರಿಯಾಗುವುದು ಎಂದರು. ಅಲ್ಲದೆ ಕಾಸರಗೋಡು ಜಿಲ್ಲೆಯ  ಬದಿಯಡ್ಕ ಕೇಂದ್ರೀಕರಿಸಿ ಸಾಂಸ್ಕøತಿಕ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಅನುದಾನ ನೀಡುವ ಮೂಲಕ ಗಡಿನಾಡಿನ ಕನ್ನಡ ಭಾ|ಷೆ, ಸಂಸ್ಕøತಿಯ ಸಂವÀರ್ಧನೆಗೆ ಬಲ ನೀಡಬೇಕು ಎಂದು ವಿನಂತಿಸಲಾಯಿತು. ಅಲ್ಲದೆ ಕಾಸರಗೋಡಿನ ಸ್ಥಳನಾಮಗಳ ವಿರೂಪಗೊಳಿಸುತ್ತಿರುವ ಬಗ್ಗೆ ಇತ್ತೀಚೆಗೆ ಸಮರ್ಥವಾಗಿ ಸ್ಪಂಧಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries