HEALTH TIPS

ಕಣ್ಣಿಗೆ ಕಾಣುವ ದೇವರುಗಳಿಗೆ ಗೌರವ ಸಲ್ಲಿಸುವ ದಿನ: ಯಾವಾಗ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

             ನಮ್ಮನ್ನ ಹೆತ್ತು-ಹೊತ್ತು ಈ ಜಗತ್ತಿಗೆ ಕೊಡುವವರೆಂದರೆ ನಮ್ಮ ಪೋಷಕರು ಅಂದ್ರೆ, ತಂದೆ-ತಾಯಿ. ಪ್ರತಿಯೊಬ್ಬರ ಜೀವನದಲ್ಲಿ ಪೋಷಕರ ಪಾತ್ರ ವರ್ಣನೆಗೆ ನಿಲುಕದ್ದು. ಸದಾ ನಮ್ಮ ಏಳಿಗೆಯನ್ನೇ ಬಯಸುವ, ನಮ್ಮ ಖುಷಿಯಲ್ಲಿ ಅವರ ನೋವನ್ನು ಮರೆಯುವಂತಹ ತ್ಯಾಗಮಯಿಗಳು ನಮ್ಮ ಹೆತ್ತವರು. ಇಂತಹ ಕಣ್ಣಿಗೆ ಕಾಣುವ ದೇವರಿಗೆ ಗೌರವ ಸಲ್ಲಿಸುವ ದಿನವೇ ರಾಷ್ಟ್ರೀಯ ಪೋಷಕರ ದಿನ ಅಥವಾ ನ್ಯಾಷನಲ್ ಪೇರೆಂಟ್ಸ್ ಡೇ. ಈ ವಿಶೇಷ ದಿನದ ಇನ್ನಷ್ಟು ಮಾಹಿತಿ ನಿಮಗಾಗಿ.


       ರಾಷ್ಟ್ರೀಯ ಪೋಷಕರ ದಿನ 2021: ನಮ್ಮ ಹೆತ್ತವರಿಗೆ ಗೌರವ ಸಲ್ಲಿಸುವುದಕ್ಕಾಗಿ ಪ್ರತಿವರ್ಷ ಒಂದು ದಿನವನ್ನು ಮೀಸಲಿಡಲಾಗುತ್ತದೆ. ಅದೇ ಜುಲೈ ತಿಂಗಳ ನಾಲ್ಕನೇ ಭಾನುವಾರ. ಇಲ್ಲಿ ಮತ್ತೊಂದು ವಿಶೇಷವೆಂದರೆ ಮೇ ನಲ್ಲಿ ಅಮ್ಮಂದಿರ ದಿನ, ಜೂನ್ ನಲ್ಲಿ ಅಪ್ಪಂದಿರ ದಿನ, ಜುಲೈನಲ್ಲಿ ಈ ಇಬ್ಬರ ಮಹತ್ವ ಸಾರುವ ಪೋಷಕರ ದಿನ. ಈ ವರ್ಷ ಈ ದಿನವನ್ನು ಜೂನ್ 25ರಂದು ಆಚರಿಸಲಾಗುತ್ತಿದೆ. ಈ ದಿನದಂದು ನಿಮ್ಮ ಅಪ್ಪ-ಅಮ್ಮ ನಿಮ್ಮ ಜೀವನದಲ್ಲಿ ವಹಿಸಿರುವ ಪಾತ್ರವನ್ನು ಅರಿತು, ಅವರಿಬ್ಬರಿಗೂ ಗೌರವ ಸಲ್ಲಿಸುವುದು ಮಕ್ಕಳ ಕರ್ತವ್ಯವೂ ಹೌದು.


         ಪೋಷಕರ ದಿನದ ಇತಿಹಾಸ: ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು 1994 ರಲ್ಲಿ ಕಾನೂನಿಗೆ ಸಹಿ ಹಾಕಿ, ಪ್ರತಿ ಜುಲೈ ನಾಲ್ಕನೇ ಭಾನುವಾರವನ್ನು ಪೋಷಕರ ದಿನವನ್ನಾಗಿ ಆಚರಿಸಲು ಯುಎಸ್ ಕಾಂಗ್ರೆಸ್ ನಿರ್ಣಯವನ್ನು ಅಂಗೀಕರಿಸಿದರು. ಮಕ್ಕಳ ಪಾಲನೆ ಹಾಗೂ ಬೆಳವಣಿಗೆಯಲ್ಲಿ ಪೋಷಕರ ಪಾತ್ರವನ್ನು ಗುರುತಿಸಿ, ಬೆಂಬಲಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆಗೆ ತಂದರು. 1994 ರಲ್ಲಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಈ ದಿನವು ತಾಯಿಯ ದಿನ ಮತ್ತು ತಂದೆಯ ದಿನವನ್ನು ಹೋಲುತ್ತದೆ.
           ದಿನದ ಮಹತ್ವ: ಮಕ್ಕಳ ಜೀವನದಲ್ಲಿ ಪೋಷಕರ ಪಾತ್ರ ಮಹತ್ವದ್ದು. ಹುಟ್ಟಿನಿಂದ ಹಿಡಿದು, ಅದರ ಶಿಕ್ಷಣ, ಉದ್ಯೋಗ, ವಿವಾಹ ಮೊದಲಾದ ಎಲ್ಲಾ ಹಂತಗಳಲ್ಲೂ ಸದಾ ಪೋಷಕರು ಬೆನ್ನುಲುಬಾಗಿ ನಿಂತಿರುತ್ತಾರೆ. ಒಳ್ಳೆಯ ಹಾಗೂ ಕೆಟ್ಟ ದಿನಗಳಲ್ಲಿ ಇರುವವರೆಂದರೆ ಅದು ಪೋಷಕರು ಮಾತ್ರ ಎಂಬುದನ್ನು ಎಂದಿಗೂ ಮರೆಯಬೇಡಿ. ನಮಗಾಗಿ ಎಲ್ಲವನ್ನೂ ತ್ಯಾಗ ಮಾಡುವ ನಮ್ಮ ತಂದೆ-ತಾಯಿಗೆ ನಾವೇನು ನೀಡಿದ್ದೇವೆ ಎಂಬ ಪ್ರಶ್ನೆ ಪ್ರತಿಯೊಬ್ಬರೂ ತಮ್ಮನ್ನು ತಾವು ಕೇಳಿಕೊಳ್ಳಬೇಕು. ಆಗ ಸಿಗುವ ಉತ್ತಮ ಬರೀ ಶೂನ್ಯ ಹೆಚ್ಚನವರದ್ದು. ಅದಕ್ಕಾಗಿಯೇ ಈ ದಿನ. ತಮ್ಮ ಮಕ್ಕಳಿಗಾಗಿ ಸದಾ ದುಡಿಯುವ ಪೋಷಕರ ಪಾತ್ರವನ್ನು ಅರಿತು, ಅವರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಅವರನ್ನು ಒಂದು ದಿನದ ಮಟ್ಟಿಗಾದರೂ ಜವಾಬ್ದಾರಿ ಮುಕ್ತನಾಗಿ ಮಾಡಿ, ಅವರ ಕೆಲಸಗಳಿಗೆಲ್ಲಾ ರಜೆ ನೀಡಿ, ಅವರನ್ನು ಖುಷಿಯಾಗಿಡಲು ಈ ದಿನ. ಇದನ್ನೆಲ್ಲಾ ಮಾಡಬೇಕಾಗಿರುವುದು ಮಕ್ಕಳ ಕರ್ತವ್ಯವಾಗಿದೆ.
         ಈ ದಿನವನ್ನು ಹೇಗೆ ಆಚರಿಸುವುದು: ನಿಮ್ಮ ಹೆತ್ತವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ ಅಥವಾ ನಿಮಗೆ ಪೋಷಕರಂತೆ ಇರುವ ವ್ಯಕ್ತಿಯನ್ನು ಭೇಟಿ ಮಾಡಿ. ಅವರ ದಿನನಿತ್ಯದ ಜಂಜಾಟಗಳನ್ನು ಬದಿಗಿಟ್ಟು ಅವರನ್ನು ಹೊರಗಡೆ ಕರೆದುಕೊಂಡು ಹೋಗಿ, ನೀವು ನಿಮ್ಮ ಅಪ್ಪ-ಅಮ್ಮನ ಮೇಲಿಟ್ಟಿರುವ ಪ್ರೀತಿಯನ್ನು ಅವರಿಗೆ ಅರ್ಥಮಾಡಿಸಿ ಅಥವಾ ವ್ಯಕ್ತಪಡಿಸಿ. #NationalParentsDay ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಮತ್ತು ಈ ದಿನವನ್ನು ಆಚರಿಸಲು ಇತರರನ್ನು ಪ್ರೋತ್ಸಾಹಿಸಿ.


        

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries