ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮೃಗಸಂರಕ್ಷಣೆ ಕಚೇರಿಗಳು ಇನ್ನು ಮುಂದೆ ಕಾಗದ ಮುಕ್ತ ಕಚೇರಿ (ಇ-ಆಫೀಸ್) ಗಳಾಗಲಿವೆ.
ಇಲಾಖೆಯ ವ್ಯಾಪ್ತಿಯ ಎಲ್ಲ ಸಂಸ್ಥೆಗಳೂ ಇ-ಆಫೀಸ್ ವ್ಯವಸ್ಥೆಗೆ ಬದಲಾಗುತ್ತಿವೆ. ರಾಜ್ಯ ಮಟ್ಟದಲ್ಲಿ ಪ್ರಥಮ ಬಾರಿಗೆ ಮೃಗಸಂರಕ್ಷಣೆ ಇಲಾಖೆ ವ್ಯಾಪ್ತಿಯ ಕಚೇರಿಗಳು ಇ-ಆಫೀಸ್ ಗಳಾಗುತ್ತಿವೆ. ಪಂಚಾಯತ್ ಮಟ್ಟದ ಮೃಗಾಸ್ಪತ್ರೆಗಳು, ಫಾರಂ ಗಳು, ಚೆಕ್ ಪೆÇೀಸ್ಟ್ ಗಳು ಸಹಿತ ಕಾಸರಗೋಡು ಜಿಲ್ಲೆಯ 50 ಸಂಸ್ಥೆಗಳು ಈ ರೀತಿ ಮಾರ್ಪಾಡುಗೊಳ್ಳಲಿವೆ.
ರಾಜ್ಯ ಮೃಗಸಂರಕ್ಷಣೆ ನಿರ್ದೇಶನಾಲಯ ಈ ಹಿಂದೆಯೇ ಇ-ಆಫೀಸ್ ವ್ಯವಸ್ಥೆಗೆ ಮಾರ್ಪಾಡುಗೊಂಡಿತ್ತು. ಸರಕಾರಿ ಕಚೇರಿಗಳನ್ನು ಕಾಗದ ರಹಿತವನ್ನಾಗಿಸುವುದರ ಜೊತೆಗೆ ಡಿಜಿಟಲ್ ತಾಂತ್ರಿಕತೆಯೊಂದಿಗೆ ಸೇವೆ ನಡೆಸುವ ಯೋಜನೆಯ ಅಂಗವಾಗಿ ಇದು ನಡೆಯಲಿದೆ. ಸಿಬ್ಬಂದಿ ಮನೆಗಳಲ್ಲಿ ಕೂಡ ಕರ್ತವ್ಯ ನಡೆಸಬಹುದಾಗಿದೆ.
ಜು.5ರಂದು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಈ ಸಂಬಂಧ ಘೋಷಣೆ ನಡೆಸುವರು. ಇಲಾಖೆ ಕಾರ್ಯದರ್ಶಿ ಟಿಂಕೂ ಬಿಸ್ವಾಸ್, ನಿರ್ದೇಶಕ ಡಾ.ಬಾಬು ಎಸ್.ಎಂ., ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾಕೃಷ್ಣನ್, ಜಿಲ್ಲಾ ಮೃಗಸಂರಕ್ಷಣೆ ಅಧಿಕಾರಿ ಡಾ.ಪಿ.ನಾಗರಾಜ್ ಮೊದಲಾದವರು ಉಪಸ್ಥಿತರಿರುವರು.