HEALTH TIPS

ವಿಶ್ವಸಂಸ್ಥೆ: ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳ ರಕ್ಷಣೆಗೆ ಗುಟೆರಸ್‌ ಕರೆ

            ನ್ಯೂಯಾರ್ಕ್‌: ಜನರ ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳನ್ನು ರಕ್ಷಿಸಲು ಶ್ರಮಿಸುವಂತೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಕರೆ ನೀಡಿದ್ದಾರೆ.

           ವಿಶ್ವ ಜನಸಂಖ್ಯಾ ದಿನವನ್ನುದ್ದೇಶಿಸಿ (ಜುಲೈ 11) ಮಾತನಾಡಿರುವ ಗುಟೆರಸ್‌, ʼವಿಶ್ವ ಜನಸಂಖ್ಯಾ ದಿನದ ಗುರುತಾಗಿ ಪ್ರತಿಯೊಬ್ಬರ ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುವ ಪ್ರತಿಜ್ಞೆ ಮಾಡೋಣ ಎಂದುʼ ಹೇಳಿದ್ದಾರೆ.

       ʼಕೋವಿಡ್‌-19 ವಿಶ್ವವನ್ನು ಕಠೋರವಾಗಿ ಕಾಡುವುದನ್ನು ಮುಂದುವರಿಸಿದ್ದು, ಒಂದರಹಿಂದೊಂದು ಮೈಲಿಗಲ್ಲು ಮುಟ್ಟುತ್ತಲೇ ಇದೆ. ಲಕ್ಷಾಂತರ ಜೀವಗಳ ದುರಂತ ಅಂತ್ಯದ ಜೊತೆಗೆ ಇದೀಗ ಕಡಿಮೆ ಸಾವಿನ ಪ್ರಕರಣಗಳು ಕಂಡುಬರುತ್ತಿವೆ. ಕೌಟುಂಬಿಕ ಹಿಂಸೆ ಪ್ರಕರಣಗಳು ಆಘಾತಕಾರಿಯಾಗಿ ಹೆಚ್ಚಳಗೊಂಡಿರುವುದು, ಮಹಿಳೆಯರು ನಿಂದಕರು/ ಹಿಂಸಿಸುವವರಿಂದ ಬಲವಂತವಾಗಿ ಪ್ರತ್ಯೇಕವಾಗಿ ಉಳಿಯುವಂತೆ ಮಾಡಿದೆ. ಮಕ್ಕಳನ್ನು ಪಡೆಯುವ ಉದ್ದೇಶವಿಲ್ಲದೆ ಗರ್ಭನಿರೋಧಕ ಸೇವೆಗಳನ್ನು ಬಳಸುವುದು ಮತ್ತು ಮಾತೃತ್ವದ ಮುಂದೂಡಿಕೆಯಿಂದ ಹೆರಿಗೆ ವಾರ್ಡ್‌ಗಳು ಖಾಲಿಯಾಗಿವೆʼ ಎಂದಿದ್ದಾರೆ.

       ʼನಮ್ಮ ಇತ್ತೀಚಿನ ಅಂದಾಜಿನ ಪ್ರಕಾರ ಕೋವಿಡ್‌-19ನಿಂದಾಗಿ 4.7 ಕೋಟಿ ಮಹಿಳೆಯರು ಮತ್ತು ಮಕ್ಕಳು ತೀವ್ರ ಬಡತನದಲ್ಲಿ ಸಿಲುಕಿದ್ದಾರೆ. ಶಾಲೆಯಿಂದ ಹೊರನಡೆದ ಸಾಕಷ್ಟು ಹೆಣ್ಣುಮಕ್ಕಳು ವಾಪಸ್‌ ಆಗುವುದಿಲ್ಲʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

          ಮುಂದುವರಿದು, ʼಮಹಿಳೆಯರ ಕಷ್ಟದ ಗಳಿಕೆ, ಸಾಂತಾನೋತ್ಪತ್ತಿ ಹಕ್ಕುಗಳು ಮತ್ತು ಆಯ್ಕೆಗಳು ಕುಸಿಯುತ್ತಿರುವುದು ವಿಶ್ವದ ಪ್ರತಿಯೊಂದು ಮೂಲೆಯಲ್ಲಿಯೂ ಗೋಚರವಾಗುತ್ತಿದೆ. ಸಾಂಕ್ರಾಮಿಕದ ಆರಂಭದೊಂದಿಗೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಯ ಸಂಪನ್ಮೂಲಗಳ ದಿಕ್ಕು ಬದಲಾಗಿದೆʼ

         ʼಆರೋಗ್ಯ ಹಕ್ಕುಗಳಲ್ಲಿನ ಈ ವ್ಯತ್ಯಯವು ಸ್ವೀಕಾರಾರ್ಹವಲ್ಲ. ಈ (ಕೋವಿಡ್‌ ವಿರುದ್ಧದ) ಹೋರಾಟದಲ್ಲಿ ಮಹಿಳೆಯನ್ನು ಒಂಟಿ ಮಾಡಲಾಗದುʼ ಎಂದೂ ಗುಟೆರಸ್‌ ತಿಳಿಸಿದ್ದಾರೆ.

ಜಾಗತಿಕ ಜನಸಂಖ್ಯೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 11ನ್ನು ವಿಶ್ವ ಜನಸಂಖ್ಯಾ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಆಡಳಿತ ಮಂಡಳಿಯು 1989ರಲ್ಲಿ ಮೊದಲ ಸಲ ಈ ಕಾರ್ಯಕ್ರಮ ಆಯೋಜಿಸಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries