ಕಾಸರಗೋಡು: ಕೇರಳ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.98 ಅಂಕಗಳಿಸಿದ ನಗರದ ಉಡುಪಿ ಗಾರ್ಡನ್‍ನಲ್ಲಿ ದುಡಿಯುತ್ತಿರುವ ಏಕನಾಥ ಮಲ್ಯ - ಶೀಲಾ ಮಲ್ಯ ಅವರ ಪುತ್ರ ಬಿಇಎಂ ಪ್ರೌಢ ಶಾಲೆಯ ವಿದ್ಯಾರ್ಥಿ ಅಭಿಷೇಕ್ ಮಲ್ಯ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಕಾಸರಗೋಡು ನಗರಸಭೆÉಯ ಮಾಜಿ ಸದಸ್ಯ ಅರುಣ್ ಕುಮಾರ್ ಶೆಟ್ಟಿ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕರಾದ ರಾಮ್ ಪ್ರಸಾದ್, ಮಹೇಶ್ ಭಟ್, ರಾಹುಲ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಭರತ್‍ರಾಜ್ ಶೆಟ್ಟಿ ಸ್ವಾಗತಿಸಿ, ಕೀರ್ತನಾ ರಾಹುಲ್ ವಂದಿಸಿದರು.