ಮಂಜೇಶ್ವರ: ಕಣ್ವತೀರ್ಥ ಶ್ರೀರಾಮಾಂಜನೇಯ ಕ್ಷೇತ್ರದಲ್ಲಿ ಗುರುಪೂಜ ಮಹೋತ್ಸವ ಅಂಗವಾಗಿ ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಗುರುವಂದನಾ ಕಾರ್ಯಕ್ರಮ ಜರುಗಿತು.ದಲಿತ, ಬಡವರೆಂಬ ಭೇದ ಭಾವ ತೋರದೆ, ಸಮಾಜದವನ್ನು ಒಗ್ಗೂಡಿಸುವ ಕೆಲಸದಲ್ಲಿ ಕ್ರಾಂತಿಕಾರಿ ಚಟುವಟಿಕೆ ನಡೆಸಿರುವ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ವಿಶ್ವಕ್ಕೆ ಆದರ್ಶರಾಗಿದ್ದಾರೆ ಎಂದು ಬಣ್ಣಿಸಲಾಯಿತು.
ಅರ್ಚಕರಾದ ರಮೇಶ್ ಉಪಾಧ್ಯಯ, ಗಿರೀಶ್ ಆಚಾರ್ಯ, ಅನಂತ ಭಟ್, ಸುದರ್ಶನ ಅಡಿಗ, ಗಾಯತ್ರಿ ಭಟ್, ಉದ್ಯಮಿ ಗೋಪಾಲ ಶೆಟ್ಟಿ ಅರಿಬೈಲ್, ಕುಬಣೂರು ಶ್ರೀ ಉಳ್ಳಾಲ್ತೀ ದೈವ ಕ್ಷೇತ್ರದ ಪಾತ್ರಿ ಸದಾಶಿವ ಕಡಂಬಾರ್, ತುಳಸೀದಾಸ್ ಮಂಜೇಶ್ವರ, ಬಾಲಕ್ರಷ್ಣ ರಾಮಾಡಿ, ಸುನಿಲ್ ಕುಮಾರ್ ಕಣ್ವತೀರ್ಥ, ಗ್ರಾಮ ಪಂ ಸದಸ್ಯೆ ವಿನಯಭಾಸ್ಕರ್ ಉಪಸ್ಥಿತರಿದ್ದರು.