HEALTH TIPS

ಕೇರಳದಲ್ಲಿ ಹೆಣ್ಮಕ್ಕಳಿಗೆ ನ್ಯಾಯ ದೊರಕಿಸಬೇಕು; ಸೋಶಿಯಲ್ ಮೀಡಿಯಾದಲ್ಲಿ ಪ್ರತಿಭಟನೆ

               ತಿರುವನಂತಪುರ: ವಂಡಿಪೆರಿಯಾರ್ ಘಟನೆಯ ಬಳಿಕ ಕೇರಳದಲ್ಲಿ ಸ್ತ್ರೀಯರ ವಿರುದ್ದ ದೌರ್ಜನ್ಯಗಳನ್ನು ಕೊನೆಗಾಣಿಸಲು ಸಾಮಾಜಿಕ ಮಾಧ್ಯಮಗಳಲ್ಲೂ ಭಾರೀ ಒತ್ತಡಗಳು ಕಂಡುಬಂದಿದೆ. ವಂಡಿಪೆರಿಯಾರ್‍ನಲ್ಲಿ ಡಿವೈಎಫ್‍ಐ ಮುಖಂಡರೊಬ್ಬರು ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬಂಧಿಸಲ್ಪಟ್ಟ ಘಟನೆಯ ಬಳಿಕ ರಾಜ್ಯ ವ್ಯಾಪಕವಾಗಿ ಆಂದೋಲನದ ರೀತಿಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ. ಜಸ್ಟೀಸ್ ಫಾರ್ ಕೇರಳ ಗಲ್ರ್ಸ್ ಎಂಬ ಹ್ಯಾಶ್‍ಟ್ಯಾಗ್ ಅಡಿಯಲ್ಲಿ ಈ ಪ್ರತಿಭಟನೆ ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.


                   ಮೂರು ವರ್ಷಗಳಿಂದ ಪುಟಾಣಿಗೆ ಕಿರುಕುಳ ನೀಡಿದ ಡಿ.ವೈ.ಎಫ್.ಐ ನಾಯಕ ಅರ್ಜುನ್ ಬಾಲಕಿಯನ್ನು ಅತ್ಯಾಚಾರಗೈದು ಬಳಿಕ ಕಿಟಕಿಯಿಂದ ನೇಣು ಬಿಗಿದು ಕೊಲೆಗೈದಿದ್ದನು. ಆರೋಪಿಯನ್ನು ಬಂಧಿಸಲಾಗಿದ್ದರೂ, ಉನ್ನತ ರಾಜಕೀಯ ಮುಖಂಡರು ಮರಣೋತ್ತರ ಪರೀಕ್ಷೆಯನ್ನು ಬುಡಮೇಲುಗೊಳಿಸಲು ಪ್ರಯತ್ನಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದರೊಂದಿಗೆ ಕೊಲೆಗಾರರೊಂದಿಗೆ ರಾಜಕೀಯ ನಾಯಕತ್ವದ ನೆರವು ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. 

            ವಾಳಯಾರ್ ನಲ್ಲಿ ಇಬ್ಬರು ಪುಟ್ಟ ಮಕ್ಕಳ ಮೇಲೆ ಅತ್ಯಾಚಾರಗೈದು ಕೊಲೆಗೈದ ಪ್ರಕರಣದ ಆರೋಪಿಗಳೂ ಡಿವೈಎಫ್‍ಐ ಕಾರ್ಯಕರ್ತರಾಗಿದ್ದರು.  ಪ್ರಕರಣದ ತನಿಖೆಯನ್ನು ಉದ್ದೇಶಪೂರ್ವಕವಾಗಿ ದಿಕ್ಕ್ಕೆಡಿಸಿ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಯಿತು. ನಂತರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.

                ಕಳೆದ ಐದು ತಿಂಗಳಲ್ಲಿ ಕೇರಳದಲ್ಲಿ 1513 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 627 ಮಂದಿ ಮಕ್ಕಳು. ಪ್ರಬುದ್ಧರೆಂದು ಹೇಳಿಕೊಳ್ಳುವ ಸಮಾಜದಲ್ಲಿ ಚಿಕ್ಕ ಮಕ್ಕಳನ್ನು ಬೇಟೆಯಾಡಲಾಗುತ್ತದೆ. ಇದರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಸೋಮವಾರ ಭಾರೀ ಸಂ|ಖ್ಯೆಯ ಜನರು ಮಾಧ್ಯಮದಲ್ಲಿ ತಮ್ಮ ಪ್ರತಿಭಟನೆ, ಆಕ್ರೋಶಗಳನ್ನು ವ್ಯಕ್ತಪಡಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries