HEALTH TIPS

ಇನ್‍ಸ್ಟಾಗ್ರಾಮ್‍ನಿಂದ ಕನ್ನಡದಲ್ಲಿ ಪೇರೆಂಟ್ಸ್ ಗೈಡ್ ಆರಂಭ

             ಬೆಂಗಳೂರು: ಭಾರತದ ಯುವಜನರ ಸುರಕ್ಷತೆಯ ಬದ್ಧತೆಯನ್ನು ಹೆಚ್ಚಿಸಿರುವ ಇನ್‍ಸ್ಟಾಗ್ರಾಮ್ ಇಂದು ಕರ್ನಾಟಕದಾದ್ಯಂತ ಜನರು ಕನ್ನಡದಲ್ಲಿ ಕಲಿಯಲು ಪೋಷಕರ ಮಾರ್ಗದರ್ಶಿಯನ್ನು (ಪೇರೆಂಟ್ಸ್ ಗೈಡ್) ಅನ್ನು ಪ್ರಾರಂಭಿಸಿದೆ. ಈ ಪ್ಲಾಟ್‍ಫಾರ್ಮ್‍ನಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಸುರಕ್ಷತಾ ವೈಶಿಷ್ಟ್ಯತೆಗಳ ಬಗ್ಗೆ ಪೋಷಕರಿಗೆ ತಿಳಿಸುವ ಮೂಲಕ ಯುವ ಜನರನ್ನು ಸುರಕ್ಷಿತವಾಗಿಡುವ ಉದ್ದೇಶವನ್ನು ಹೊಂದಿದೆ.


         ಈ ಪೇರೆಂಟ್ಸ್ ಗೈಡ್ ಇನ್‍ಸ್ಟಾಗ್ರಾಮ್‍ನ ಮೂಲವಾಗಿದ್ದು, ಬದಲಾಗುತ್ತಿರುವ ಡಿಜಿಟಲ್ ಲ್ಯಾಂಡ್‍ಸ್ಕೇಪ್ ಅನ್ನು ಉತ್ತಮವಾಗಿ ತಿಳಿದುಕೊಳ್ಳಲು ಪೋಷಕರಿಗೆ ನೆರವಾಗುತ್ತಿದೆ. ಇದು ಅನೇಕ ದೇಶಗಳಲ್ಲಿ ಲಭ್ಯವಿದೆ. ಇದು ತಮ್ಮ ಮಕ್ಕಳೊಂದಿಗೆ ಸಂಭಾಷಣೆ ಪ್ರಾರಂಭಿಕವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಇದು ತಮ್ಮ ಮಗುವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಸುರಕ್ಷಿತವಾಗಿಡಲು ಇರುವ ಸಾಧನಗಳ ಬಗ್ಗೆ ಮಾಹಿತಿಯನ್ನು ಪೂರೈಸುತ್ತದೆ. ಮಕ್ಕಳ ಹಕ್ಕುಗಳು ಮತ್ತು ಸುರಕ್ಷತೆಯ ಬಗ್ಗೆ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಸೆಂಟರ್ ಫಾರ್ ಸೋಶಿಯಲ್ ರೀಸರ್ಚ್, ಸೈಬರ್‍ಪೀಸ್ ಫೌಂಡೇಷನ್, ಆರಂಭ್ ಇಂಡಿಯಾ ಇನಿಶಿಯೇಟಿವ್, ಯಂಗ್ ಲೀಡರ್ಸ್ ಫಾರ್ ಆಕ್ಟಿವಿಟಿ ಸಿಟಿಜನ್‍ಶಿಪ್, ಇಟ್ಸ್ ಒಕೆ ಟು ಟಾಕ್ ಅಂಡ್ ಸೂಸೈಡ್ ಪ್ರಿವೆನ್ಷನ್ ಇಂಡಿಯಾ ಫೌಂಡೇಷನ್‍ನಂತಹ ಪ್ರಮುಖ ಸಂಸ್ಥೆಗಳಿಂದ ಮಾರ್ಗದರ್ಶಿಯ ಒಳಹರಿವುಗಳನ್ನು ಹೊಂದಿದೆ.

         ಇನ್‍ಸ್ಟಾಗ್ರಾಮ್‍ನಲ್ಲಿ ಯಾರು ಮೆಸೇಜ್ ಕಳುಹಿಸಬಹುದು ಮತ್ತು ಇನ್‍ಸ್ಟಾಗ್ರಾಮ್ ಡೈರೆಕ್ಟ್‍ನಲ್ಲಿ ಯಾರು ಗುಂಪುಗಳಿಗೆ ಸೇರಿಸಬಹುದು ಎಂಬುದನ್ನು ಆಯ್ಕೆ ಮಾಡುವ ನಿಯಂತ್ರಣವನ್ನು ಕ್ರಿಯೇಟರ್ ಮತ್ತು ಬ್ಯುಸಿನೆಸ್ ಅಕೌಂಟ್‍ಗಳಿಗೆ ನೀಡುವ ಡಿಎಂ ರೀಚೇಬಿಲಿಟಿ ಕಂಟ್ರೋಲ್ಸ್'ನಂತಹ ಇನ್‍ಸ್ಟಾಗ್ರಾಮ್‍ನಲ್ಲಿನ ಎಲ್ಲಾ ಹೊಸ ಸುರಕ್ಷತಾ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿಗಳನ್ನು ಈ ಗೈಡ್ ಒಳಗೊಂಡಿದೆ. ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ, ಬಲ್ಕ್ ಕಮೆಂಟ್ ಮ್ಯಾನೇಜ್ಮೆಂಟ್'- ಇದು ಜನರಿಗೆ ಕಮೆಂಟ್‍ಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸುವ ಅಂದರೆ ಡಿಲೀಟ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಇದರ ಜೊತೆಗೆ ನಕಾರಾತ್ಮಕ ಕಮೆಂಟ್‍ಗಳನ್ನು ಪೋಸ್ಟ್ ಮಾಡುವ ಬಹು ಖಾತೆಗಳನ್ನು ನಿರ್ಬಂಧಿಸುತ್ತದೆ. ಇದರಲ್ಲಿರುವ ಇನ್ನು ಕೆಲವು ವೈಶಿಷ್ಟ್ಯತೆಗಳಲ್ಲಿ ರೆಸ್ಟ್ರಿಕ್ಟ್' ನಿಮ್ಮ ಮಗುವಿಗೆ ಅರಿವಿಲ್ಲದೇ ಅನಗತ್ಯ ಸಂವಹನ ನಡೆಸುವುದರಿಂದ ರಕ್ಷಣೆ ಮಾಡುತ್ತದೆ.

        ಭಾರತದಲ್ಲಿ ಇನ್‍ಸ್ಟಾಗ್ರಾಮ್‍ನ ಪಬ್ಲಿಕ್ ಪಾಲಿಸಿ ಅಂಡ್ ಕಮ್ಯುನಿಟಿ ಔಟ್‍ರೀಚ್ ಮ್ಯಾನೇಜರ್ ತಾರಾ ಬೇಡಿ ಅವರು ಮಾತನಾಡಿ, ನಾವು ಆನ್‍ಲೈನ್‍ನಲ್ಲಿ ವಿಶೇಷವಾಗಿ ಯುವಜನರಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಪೋಷಕರು ತಮ್ಮ ಮಕ್ಕಳು ಬಳಸುವ ಉತ್ಪನ್ನಗಳು ಮತ್ತು ವೈಶಿಷ್ಟ್ಯತೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಈ ತಿಳುವಳಿಕೆಯು ಪೋಷಕರು ತಮ್ಮ ಮಕ್ಕಳನ್ನು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಬಳಸುವುದರೊಂದಿಗೆ ಹೆಚ್ಚು ಆರಾಮವಾಗಿರಲು ಸಹಾಯ ಮಾಡುತ್ತದೆ. ಏಕೆಂದರೆ, ಅವರಿಗೆ ಲಭ್ಯವಿರುವ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಅವರು ತಿಳಿದುಕೊಂಡಿರುತ್ತಾರೆ. ಇನ್‍ಸ್ಟಾಗ್ರಾಮ್‍ಗಾಗಿ ಪೇರೆಂಟ್ಸ್ ಗೈಡ್‍ನೊಂದಿಗೆ ನಾವು ಇದನ್ನು ಸಾಧಿಸುವ ಗುರಿ ಹೊಂದಿದ್ದೇವೆ'' ಎಂದು ತಿಳಿಸಿದರು.

         ಇನ್‍ಸ್ಟಾಗ್ರಾಮ್‍ನ ಈ ಪೇರೆಂಟ್ಸ್ ಗೈಡ್ ಪ್ಲಾಟ್‍ಫಾರ್ಮ್‍ನಲ್ಲಿ ಸುರಕ್ಷಿತ ಮತ್ತು ಬೆಂಬಲದ ವಾತಾವರಣವನ್ನು ಬೆಳೆಸುವ ಮತ್ತೊಂದು ಹೆಜ್ಜೆಯಾಗಿದೆ. ಇತ್ತೀಚೆಗೆ, ಯುವಜನರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್‍ಸ್ಟಾಗ್ರಾಮ್ ಹಲವಾರು ಬದಲಾವಣೆಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ 16 ವರ್ಷಕ್ಕಿಂತ ಕೆಳಗಿನ ಪ್ರತಿಯೊಬ್ಬರೂ ಇನ್‍ಸ್ಟಾಗ್ರಾಮ್ ಸೇರಿಕೊಂಡಾಗ ಅವರ ಖಾಸಗಿ ಖಾತೆಗೆ ಡೀಫಾಲ್ಟ್ ಆಗುತ್ತಾರೆ ಮತ್ತು ಸೆಕ್ಯೂರಿಟಿ ಚೆಕಪ್' ಎಂಬ ಹೊಸ ವೈಶಿಷ್ಟ್ಯತೆಯು ಖಾತೆಗಳನ್ನು ಹ್ಯಾಕ್ ಮಾಡಿರಬಹುದಾದ ಜನರಿಗೆ ಸುರಕ್ಷಿತಗೊಳಿಸಲು ಅಗತ್ಯವಾದ ಹಂತಗಳ ಮೂಲಕ ಮಾರ್ಗದರ್ಶನ ನೀಡುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries