ಕಾಸರಗೋಡು: ಜಿಲ್ಲೆಯ ಬಹುಭಾಷಾ ಸಂಸ್ಕøತಿ ಮತ್ತು ವೈವಿಧ್ಯತೆ ಆಡಳಿತಾತ್ಮಕ ಕೆಲಸಕಾರ್ಯಗಳಿಗೆ ಸಹಕಾರಿಯಾಗಿರುವುದಾಗಿ ನಿರ್ಗಮಿತ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ತಿಳಿಸಿದ್ದಾರೆ. ಕಾಸರಗೋಡು ಪ್ರೆಸ್‍ಕ್ಲಬ್ ವತಿಯಿಂದ ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಜಲಸಂರಕ್ಷಣೆಗೆ ಆದ್ಯತೆ ನೀಡಿದಾಗ ಮಾತ್ರ ಆಹಾರ ಭದ್ರತೆ ಒದಗಿಸಲು ಸಾಧ್ಯ. ವ್ಯಾಪಿಸುತ್ತಿರುವ ಕೋವಿಡ್ ತಡೆಗೆ ಸರ್ಕಾರದ ನಿರ್ದೇಶ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಸ್ವಯಂಬೋಧನೆ ಅಗತ್ಯ ಎಂದು ತಿಳಿಸಿದರು.
ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಜಲಸಂರಕ್ಷಣೆ, ಆಹಾರ ಭದ್ರತೆ ಹಾಗೂ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಮಧುಸೂಧನನ್, ಹಿರಿಯ ಪತ್ರಕರ್ತ ಜಯಕೃಷ್ಣನ್ ನರಿಕುಟ್ಟಿ ಶ್ಲಾಘಿಸಿದರು. ಕೆ.ವಿ ಪದ್ಮೇಶ್, ಪ್ರದೀಪ್ನಾರಾಯಣ್ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಕ್ಟರ್ ಜಾರ್ಜ್ ಸಂಸ್ಮರಣೆ ನಡೆಯಿತು. ಪತ್ರಿಕಾ ಛಾಯಾಗ್ರಾಹಕ ರಾಮನಾಥ ಪೈ ಸಂಸ್ಮರಣಾ ಭಾಷಣ ಮಾಡಿದರು.