ಮಂಜೇಶ್ವರ:ಕೆ. ಪಿ.ಎಸ್. ಟಿ.ಎ ಮಂಜೇಶ್ವರ ಉಪಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಹಾಯಕ ಶಿಕ್ಷಣಾಧಿಕಾರಿ ಕಚೇರಿ ಮಂಜೇಶ್ವರ, ಇಲ್ಲಿ ಧರಣಿ ಹಮ್ಮಿಕೊಳ್ಳಲಾಯಿತು. ಧರಣಿಯ ಉದ್ಘಾಟನೆಯನ್ನು ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಅಧ್ಯಕ್ಷ ಪಿ ಟಿ ಬೆನ್ನಿ ನೆರವೇರಿಸಿದರು. ಸಾರ್ವಜನಿಕ ವಿದ್ಯಾಲಯಗಳ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ಮತ್ತು ಮೊದಲೇ ಲಭಿಸಬೇಕಾದ ಸವಲತ್ತುಗಳನ್ನು ನೀಡುವುದು, ಸಾವಿರದ ಏಳು ನೂರರಷ್ಟು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ನೇಮಕಾತಿ ನಡೆಸುವುದು ಮುಂತಾದ ಹಲವು ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಸಲಾಯಿತು. ರಾಜ್ಯದಾದ್ಯಂತ ಎಲ್ಲಾ ಶಿಕ್ಷಣಾಧಿಕಾರಿ ಕಚೇರಿಗಳ ಮುಂದೆ ಧರಣಿ ನಡೆಸುವುದರ ಭಾಗವಾಗಿ, ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಧರಣಿ ನಡೆಯಿತು. ಉಪ ಜಿಲ್ಲಾ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಎಂ ಸ್ವಾಗತಿಸಿ, ಕೋಶಾಧಿಕಾರಿ ಜಬ್ಬಾರ್. ಬಿ. ವಂದಿಸಿದರು. ಉಪಜಿಲ್ಲಾ ಅಧ್ಯಕ್ಷ ವಿಮಲ್ ಅಡಿಯೋಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಭಾಷಾ ಅಲ್ಪಸಂಖ್ಯಾತ ಸೆಲ್ ಕನ್ವೀನರ್ ಶ್ರೀನಿವಾಸ ಕೆ. ಯಚ್. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ವಸಂತಕುಮಾರ್ ಸಿ.ಕೆ ಮುಖ್ಯ ಅತಿಥಿಯಾಗಿದ್ದರು. ಸುರೇಂದ್ರನ್ ಚೀಮೇನಿ, ಜನಾರ್ಧನ ಕೆ.ವಿ., ಮೂಸ ಕುಂಞ, ತಂಬಾನ್. ಎಂ. ಮೊದಲಾದವರು ಶುಭಾಶಂಸನೆಗೈದರು. ಹಿರಿಯ ನೇತಾರ ವಸಂತಕುಮಾರ್ ಸಿ ಕೆ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.