ನಾಗ್ಪುರ: ನಾಗ್ಪುರದಲ್ಲಿನ ದೇಶದ ಮೊದಲ ಖಾಸಗಿ ದ್ರವೀಕೃತ ನೈಸರ್ಗಿಕ ಅನಿಲ -ಎಲ್‌ಎನ್ ಜಿ ಘಟಕವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜು.11 ರಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಒಟ್ಟಾರೆ ಸಾಗಣೆ ವೆಚ್ಚವನ್ನು ತಗ್ಗಿಸುವ ಶುದ್ಧ ಮತ್ತು ವೆಚ್ಚಪರಿಣಾಮಕಾರಿ ಇಂಧನ ಈ ಎಲ್‌ಎನ್ಜಿ ಎಂದರು. ಇದು ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದು ಭವಿಷ್ಯದಲ್ಲಿ ಸಾರಿಗೆ ವಲಯದಲ್ಲಿ ಕ್ರಾಂತಿ ತರಲಿದೆ ಎಂದು ಗಡ್ಕರಿ ಹೇಳಿದರು.
ಎಥನಾಲ್, ವಿದ್ಯುತ್, ಸಂಕುಚಿತ ನೈಸರ್ಗಿಕ ಅನಿಲ, ದ್ರವೀಕೃತ ನೈಸರ್ಗಿಕ ಅನಿಲ ಮೊದಲಾದವನ್ನು ಸಾಂಪ್ರದಾಯಿಕ ಇಂಧನಕ್ಕೆ ಪರ್ಯಾಯವಾಗಿ ಬಳಸಬಹುದು. ಕೃಷಿ ಉತ್ಪನ್ನಗಳಿಂದ ತಯಾರಿಸಲಾದ ಜೈವಿಕ ಎಥನಾಲ್ ಪ್ರಯೋಗ ಯಶಸ್ಸು ಕಂಡಿದ್ದು, ದೇಶದಲ್ಲಿ ಹೆಚ್ಚುವರಿ ಉತ್ಪಾದನೆಯಾಗುತ್ತಿರುವ ಸಕ್ಕರೆ ಮತ್ತು ಅಕ್ಕಿಯನ್ನು ಜೈವಿಕ ಇಂಧನವಾಗಿ ಬಳಸಬಹುದು ಎಂದೂ ಸಹ ಗಡ್ಕರಿ ಸಲಹೆ ನೀಡಿದರು.