ಬದಿಯಡ್ಕ: ಚಿನ್ನ ಕಳ್ಳಸಾಗಾಟ, ಅರಣ್ಯ ಲೂಟಿದಾರರ ರಕ್ಷಣೆಗಾಗಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಪರವಾದ ನಿಲುವು ಹೊಂದಿದೆ ಎಂದು ಆರೋಪಿಸಿ ಭಾರತೀಯ ಜನತಾ ಯುವ ಮೋರ್ಚಾ ಬದಿಯಡ್ಕ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಯುವಮೋರ್ಛಾ ಕಾಸರಗೋಡು ಮಂಡಲ ಅಧ್ಯಕ್ಷ ರಕ್ಷಿತ್ ಕೆದಿಲಾಯ ಉದ್ಘಾಟಿಸಿದರು. ಯುವಮೋರ್ಚಾ ಬದಿಯಡ್ಕ ಪಂಚಾಯತ್ ಸಮಿತಿ ಅಧ್ಯಕ್ಷ ಹಿತೇಶ್ ಬದಿಯಡ್ಕ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಪ್ರಸಾದ್ ಬದಿಯಡ್ಕ, ಅವಿನಾಶ್ ಬದಿಯಡ್ಕ, ಚಂದ್ರಹಾಸ ಮುಂತಾದವರು ನೇತೃತ್ವ ವಹಿಸಿದರು.