HEALTH TIPS

ತುಳುನಾಡ ಆಟಿ ಸ್ಪೆಷಲ್: ಪೆಲಕ್ಕಾಯಿ ಗಟ್ಟಿ/ ಹಲಸಿನ ಹಣ್ಣಿನ ಕಡಬು ರೆಸಿಪಿ

             ಆಷಾಢ ಮಾಸವನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುವುದು. ಅವುಗಳಲ್ಲಿ ಒಂದು ನಮ್ಮ ತುಳುನಾಡಿನ ಆಟಿ ತಿಂಗಳು. ಇಲ್ಲಿ ಆಷಾಢವನ್ನು ಆಟಿ ಎಂದು ಕರೆಯಲಾಗುತ್ತಿದ್ದು, ಈ ತಿಂಗಳಲ್ಲಿ ಹೆಚ್ಚಾಗಿ ನೈಸರ್ಗಿಕವಾಗಿ ಸಿಗುವ ಪದಾರ್ಥಗಳಿಂದಲೇ ಆಹಾರ ತಯಾರಿಸುತ್ತಾರೆ. ಅವುಗಳಲ್ಲಿ ನಾವಿಂದು ಹೇಳ ಹೊರಟಿರುವುದು ಆಟಿ ಕಾಲದ ಪೆಲಕ್ಕಾಯಿ ಗಟ್ಟಿ ಬಗ್ಗೆ. ಹಲಸಿನ ಹಣ್ಣಿನ ಕಡುಬು ಎಂದೂ ಕರೆಯುವ ಈ ತಿಂಡಿಯನ್ನು ಕರಾವಳಿಯಲ್ಲಿ ಹೇಗೆ ಮಾಡುತ್ತಾರೆ ಎಂಬುದರ ಸವಿವರ ಇಲ್ಲಿದೆ.

                   ತುಳುನಾಡ ಆಟಿ ಸ್ಪೆಷಲ್: ಪೆಲಕ್ಕಾಯಿ ಗಟ್ಟಿ/ ಹಲಸಿನ ಹಣ್ಣಿನ ಕಡಬು ರೆಸಿಪಿ
         INGREDIENTS ಬೇಕಾಗಿರುವ ಪದಾರ್ಥಗಳು: ಹಲಸಿನ ಹಣ್ಣು- 2 ಕಪ್ ಬೆಲ್ಲ - ಅರ್ಧ ಕಪ್ ಏಲಕ್ಕಿ ಪುಡಿ - ಕಾಲು ಚಮಚ ತಾಜಾ ತೆಂಗಿನಕಾಯಿ - 2 ಕಪ್ ಅಕ್ಕಿ - 2 ಕಪ್ ಉಪ್ಪು - ರುಚಿಗೆ ತೇಗದ ಎಲೆಗಳು - 20 (ಲಭ್ಯವಿಲ್ಲದಿದ್ದರೆ ಬಾಳೆ ಎಲೆಗಳನ್ನು ಬಳಸಿ)

                      ತಯಾರಿಸುವ ವಿಧಾನ: 2 ಕಪ್ ಅಕ್ಕಿ ತೊಳೆದು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಸುಮಾರು 20 ತೇಗದ ಎಲೆಗಳನ್ನು ಸ್ವಚ್ಛಗೊಳಿಸಿ ಒಣಗಿಸಿ. ಹಲಸಿನ ಹಣ್ಣನ್ನು ಬಿಡಿಸಿಕೊಂಡು, ರುಬ್ಬಲು ಸುಲಭವಾಗುವ ರೀತಿಯಲ್ಲಿ ಕತ್ತರಿಸಿಟ್ಟುಕೊಳ್ಳಿ. ರುಬ್ಬುವ ಜಾರ್ ತೆಗೆದುಕೊಂಡು 2 ಕಪ್ ಕತ್ತರಿಸಿದ ಹಲಸಿನ ಹಣ್ಣು, ಅರ್ಧ ಕಪ್ ಬೆಲ್ಲ ಮತ್ತು ಕಾಲು ಚಮಚ ಏಲಕ್ಕಿ ಪುಡಿಯನ್ನು ಸೇರಿಸಿ. ಬೇರಾವುದನ್ನು ಸೇರಿಸದೆ ಈ ಪದಾರ್ಥಗಳನ್ನು ಮಾತ್ರ ರುಬ್ಬಿಕೊಳ್ಳಿ. ಬ್ಯಾಟರ್ ಗಟ್ಟಿಯಾಗಿರಬೇಕು, ಆದ್ದರಿಂದ ನೀರನ್ನು ಸೇರಿಸಬೇಡಿ. ಈಗ ತಯಾರಾದ ಹಲಸಿನ ಹಣ್ಣಿನ ಮಿಶ್ರಣಕ್ಕೆ 2 ಕಪ್ ತೆಂಗಿನಕಾಯಿ ಮತ್ತು ನೆನೆಸಿದ ಅಕ್ಕಿಯನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ನೀರು ಸೇರಿಸದೇ ಎಲ್ಲವನ್ನೂ ರುಬ್ಬಿಕೊಳ್ಳಿ. ಬ್ಯಾಟರ್ ಸಿದ್ಧವಾದ ನಂತರ, ತೇಗದ ಎಲೆಗಳನ್ನು ತೆಗೆದುಕೊಂಡು ಅದಕ್ಕೆ 1 ಅಥವಾ 2 ಸೌಟ್ ಬ್ಯಾಟರ್ ನ್ನು ಎಲೆಯ ಮೇಲೆ ಹರಡಿ. ಜಾಸ್ತಿ ದಪ್ಪವೂ ಬೇಡ, ಜಾಸ್ತಿ ತೆಳ್ಳಗೆಯೂ ಆಗದಂತೆ ಹರಡಿ. ಈಗ 4 ಬದಿಗಳಿಂದ ಎಲೆಗಳನ್ನು ಮುಚ್ಚಿ. ಇಡ್ಲಿ ಸ್ಟೀಮರ್ ನಲ್ಲಿ ಎಲ್ಲಾ ಎಲೆಗಳನ್ನು ಇದೇ ರೀತಿ ಮಾಡಿ ಒಳಗಿಡಿ. ಹಲಸಿನ ಹಣ್ಣು ಬೇಯಲು ಸಮಯ ತೆಗೆದುಕೊಳ್ಳುತ್ತದೆ. ಕನಿಷ್ಟ 30 ನಿಮಿಷಗಳ ಕಾಲ ಹೈ ಫ್ಲೇಮ್ ನಲ್ಲಿ ಕಡುಬನ್ನು ಬೇಯಿಸಬೇಕಾಗುತ್ತದೆ. ಬೆಂದ ನಂತರ ಎಲೆಗಳನ್ನು ಬಿಚ್ಚಿ. ಕಡುಬು ಹಳದಿ ಅಥವಾ ಕಿತ್ತಳೆ-ಕೆಂಪು ಬಣ್ಣಕ್ಕೆ ಬದಲಾಗಿರುವುದನ್ನು ಕಾಣುತ್ತೀರಿ. ಏಕೆಂದರೆ ಅದಕ್ಕೆ ಬಳಸಿದ ತೇಗದ ಎಲೆಗಳಿಂದ. ಇವುಗಳು ಬಣ್ಣ, ಪರಿಮಳ ಮತ್ತು ಔ​​ಷಧೀಯ ಮೌಲ್ಯಗಳನ್ನು ಕಡುಬಿಗೆ ಹಸ್ತಾಂತರಿಸುತ್ತವೆ. ಇವುಗಳನ್ನು ಕೇಕ್ ನಂತೆ ಕತ್ತರಿಸಿದರೆ, ಪೆಲಕ್ಕಾಯಿ ಗಟ್ಡಿ ಸವಿಯಲು ಸಿದ್ದ. ಈ ರುಚಿಯಾದ ಹಲಸಿನ ಹಣ್ಣಿನ ಕಡುಬು ಅಥವಾ ಪೆಲಕ್ಕಾಯಿ ಗಟ್ಟಿಯನ್ನು ತುಪ್ಪ ಅಥವಾ ಚಿಕನ್ ಸುಕ್ಕದೊಂದಿಗೆ ಸವಿಯಬಹುದು.
               INSTRUCTIONS NUTRITIONAL INFORMATION   ಕೊಬ್ಬು - 0.1ಗ್ರಾ ಪ್ರೋಟೀನ್ - 1.2ಗ್ರಾ ಕಾರ್ಬೋಹೈಡ್ರೇಟ್ - 16ಗ್ರಾ ಫೈಬರ್ - 0.33ಗ್ರಾ




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries