ನವದೆಹಲಿ: ಈ ವರ್ಷದಿಂದ ದುಬೈನಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೇಂದ್ರವನ್ನು ಸ್ಥಾಪಿಸುವುದಾಗಿ ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ. ಮಧ್ಯಪ್ರಾಚ್ಯದಲ್ಲಿ ಭಾರತೀಯ ವಿದ್ಯಾರ್ಥಿ ಸಮುದಾಯಕ್ಕೆ ಸಹಕಾರಿಯಾಗುವುದಕ್ಕೆ ಇದೇ ಮೊದಲ ಬಾರಿಗೆ ಕುವೈಟ್ ನಲ್ಲಿ ಪರೀಕ್ಷೆಗಳನ್ನು ನಡೆಸುವುದಾಗಿ ಈ ತಿಂಗಳ ಪ್ರಾರಂಭದಲ್ಲಿ ಸಚಿವಾಲಯ ಹೇಳಿತ್ತು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ಕುವೈಟ್ ನಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ನೀಟ್ ಪರೀಕ್ಷಾ ಕೇಂದ್ರದ ಜೊತೆಗೆ ಈ ವರ್ಷ ದುಬೈ ನಲ್ಲಿ ಮತ್ತೊಂದು ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೆಚ್ ಆರ್ ಡಿ ಕಾರ್ಯದರ್ಶಿ ಅಮಿತ್ ಖರೆ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯ ಸಮುದಾಯಕ್ಕೆ ಈ ಬಗ್ಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು" ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪರೀಕ್ಷೆಗಳನ್ನು ಈ ವರ್ಷ ಹಿಂದಿ, ಪಂಜಾಬಿ, ಅಸ್ಸಾಮಿ, ಬೆಂಗಾಳಿ, ಒಡಿಯಾ, ಗುಜರಾತ್, ಮರಾಠಿ, ತೆಲುಗು, ಮಲಯಾಳಂ, ಕನ್ನಡ, ತಮಿಳು, ಉರ್ದು ಹಾಗೂ ಇಂಗ್ಲೀಶ್, ಉರ್ದುಗಳು ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಭಾಷೆಗಳನ್ನು ಪಂಜಾಬಿ ಹಾಗೂ ಮಲಯಾಳಂ ಎರಡು ಹೊಸ ಭಾಷೆಗಳಾಗಿವೆ. ಆಗಸ್ಟ್ 1 ಕ್ಕೆ ನಿಗದಿಯಾಗಿದ್ದ ಪರೀಕ್ಷೆಗಳು ಸೆಪ್ಟೆಂಬರ್ 12 ಕ್ಕೆ ಮುಂದೂಡಲಾಗಿದೆ. ಪರೀಕ್ಷೆಗಳನ್ನು ನಡೆಸುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಏರಿಕೆ ಮಾಡಲಾಗಿದೆ. 2020 ರಲ್ಲಿ 3,862 ಇದ್ದ ಪರೀಕ್ಷಾ ಕೇಂದ್ರಗಳನ್ನೂ ಈ ಬಾರಿ ಏರಿಕೆ ಮಾಡಲಾಗಿದೆ.