ಕೊರೊನಾವೈರಸ್ ತಡೆಗಟ್ಟಲು ಲಸಿಕೆ ಇದೆ, ಆದರೆ ಲಸಿಕೆ ಚುಚ್ಚಿದ ತಕ್ಷಣ ನಾವು ಕೊರೊನಾದಿಂದ ಸಂಪೂರ್ಣ ಸುರಕ್ಷಿತರು ಎಂದು ಭಾವಿಸುವಂತಿಲ್ಲ. ಏಕೆಂದರೆ ಕೊರೊನಾ ಲಸಿಕೆ ಪಡೆದವರಲ್ಲಿಯೂ ಕೊರೊನಾ ಸೋಂಕು ತಗುಲುತ್ತಿವೆ. ಅದರಲ್ಲೂ ಡೆಲ್ಟಾ ಪ್ಲಸ್‌ನಂಥ ರೂಪಾಂತರ ಕೊರೊನಾವೈರಸ್ ಎರಡು ಡೋಸ್ ಲಸಿಕೆ ಪಡೆದವರಲ್ಲಿಯೂ ಕಂಡು ಬಂದಿದೆ.
ವಿಶ್ವದಲ್ಲಿ ಲಸಿಕೆ ಪಡೆದವರಲ್ಲಿ ಡೆಲ್ಟಾ ಪ್ಲಸ್‌ನ ಹಲವು ಕೇಸ್‌ಗಳು ವರದಿಯಾಗಿದ್ದು, ಲಸಿಕೆ ಪಡೆದವರಲ್ಲಿ ರೋಗ ತೀವ್ರತೆ ಲಸಿಕೆ ಪಡೆಯದೇ ಇರುವವರಿಗೆ ಹೋಲಿಸಿದಾಗ ಕಡಿಮೆ ಇದೆ. ಕೊರೊನಾ ಲಸಿಕೆ ಪಡೆದವರಲ್ಲಿಸೋಂಕು ತಗುಲಿದಾಗ ಕಂಡು ಬರುವ ಲಕ್ಷಣಗಳು ಭಿನ್ನವಾಗಿವೆ ಎಂದು ಕ್ಲಿನಿಕಲ್ ಅಧ್ಯಯನ ತಿಳಿಸಿದೆ.
ಲಸಿಕೆ ಪಡೆದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಆ್ಯಂಟಿಬಾಡಿ ಉತ್ಪತ್ತಿಯಾಗುವುದು, ಇದರಿಂದ ಅಪಾಯದ ತೀವ್ರತೆ ಕಡಿಮೆಯಾಗುವುದು, ಹರಡುವ ಸಾಧ್ಯತೆ ಕೂಡ ಕಡಿಮೆಯಾಗುವುದು, ಅಲ್ಲದೆ ಲಸಿಕೆ ಪಡೆದವರಲ್ಲಿ ರೋಗ ಲಕ್ಷಣಗಳು ಅಷ್ಟೇನು ಗಂಭೀರವಾಗದ ಕಾರಣ ಸಾವಿನ ಸಂಖ್ಯೆ ತಗ್ಗುವುದು. ಇನ್ನು ಲಸಿಕೆ ಪಡೆದವರಲ್ಲಿ ಕೊರೊನಾ ಸೋಂಕು ತಗುಲಿದಾಗ ಅದು ಅವರ ದೇಹದ ಮೇಲೆ ಬೀರುವ ಪರಿಣಾಮಗಳು ಕೂಡ ಲಸಿಕೆಯಿಂದ-ಲಸಿಕೆಗೆ ಭಿನ್ನವಾಗಿರುತ್ತದೆ ಎಂದು ಯುಕೆಯ Zoe symptom study app ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ತಲೆನೋವು: ತಲೆನೋವು SARS-COV-2 ವೈರಸ್‌ನ ಸಾಮನ್ಯ ಲಕ್ಷಣವಾಗಿದೆ. ಅಲ್ಲದೆ ಡೆಲ್ಟಾ ವೈರಸ್ ತಗುಲಿದವರಲ್ಲಿಯೂ ಈ ಲಕ್ಷಣಗಳು ಕಂಡು ಬರುತ್ತಿದೆ. ವಿಪರೀತ ತಲೆನೋವು, ಮೈಕೈ ನೋವು ಉಂಟಾಗುವುದು. ತಲೆನೋವು 3 ದಿನಗಳಿಗಿಂತ ಅಧಿಕ ಸಮಯವಿದ್ದು ಅದರ ಜೊತೆಗೆ ಮೈಕೈ ನೋವು, ಮೈಯೆಲ್ಲಾ ಒಂಥರಾ ಬಿಗಿಯಾದ ಅನುಭವ ಉಂಟಾಗುತ್ತಿದ್ದರೆ ಅದು ಕೊರೊನಾ ಲಕ್ಷಣವಿರಬಹುದು, ಪರೀಕ್ಷೆ ಮಾಡಿಸಿ.
ಶೀತ ಶೀತವಿದ್ದರೆ ಸಾಮಾನ್ಯವಾಗಿ ನಾವು ನಿರ್ಲಕ್ಷ್ಯ ಮಾಡುತ್ತೇವೆ, ಆದರೆ ಶೀತದಿಂದ ತುಂಬಾ ತೊಂದರೆಯಾಗುತ್ತಿದ್ದರೆ ನಿರ್ಲಕ್ಷ್ಯ ಮಾಡದಿರುವುದು ಒಳ್ಳೆಯದು, ಏಕೆಂದರೆ ಇದರಿಂದ ಶ್ವಾಸಕೋಶಕ್ಕೆ ಹಾನಿಯುಂಟಾಗಬಹುದು, ತುಂಬಾ ದಿನ ಕಾಯದೆ ಬೇಗ ಪರೀಕ್ಷೆ ಮಾಡಿಸಿ.
ಸೀನು ತುಂಬಾ ಸೀನು ಬರುತ್ತಿದ್ದರೆ ಲಸಿಕೆ ಪಡೆದವರು ಒಮ್ಮೆ ಕೊರೊನಾ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಏಕೆಂದರೆ ಲಸಿಕೆ ಪಡೆದವರಲ್ಲಿ ಕೊರೊನಾವೈರಸ್ ತಗುಲಿದಾಗ ವಿಪರೀತ ಸೀನು ಕಂಡು ಬರುವುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಗಂಟಲು ಕೆರೆತ ಶೀತ-ಕೆಮ್ಮು ಉಂಟಾದಾಗ ಗಂಟಲು ಕೆರೆತ ಸಾಮಾನ್ಯವಾಗಿ ಕಂಡು ಬರುತ್ತದೆ, ಆದರೆ ತುಂಬಾ ಗಂಟಲು ಕೆರೆತ, ಧ್ವನಿಯಲ್ಲಿ ಬದಲಾವಣೆ, ಉಸಿರಾಟದ ತೊಂದರೆ ಕಂಡು ಬಂದರೆ ಕೊರೊನಾ ಪರೀಕ್ಷೆ ಮಾಡಿಸಿ.
ಇತರ ಲಕ್ಷಣಗಳೂ ಕಂಡು ಬರುವುದೇ? ಕೊರೊನಾ ಲಸಿಕೆ ಪಡೆದವರಿಗೆ ರೂಪಾಂತರ ಕೊರೊನಾವೈರಸ್ ತಗುಲಿದರೆ ಮೇಲೆ ಹೇಳಿದ ಲಕ್ಷಣಗಳ ಜೊತೆಗೆ ಉಸಿರಾಟದಲ್ಲಿ ತೊಂದರೆ, ಬೇಧಿ, ಹೊಟ್ಟೆ ನೋವು, ಮೈಕೈ ನೋವು, ತಲೆಸುತ್ತು, ಸುಸ್ತು, ಮೈಕೈ ನೋವು ಮುಂತಾದ ಲಕ್ಷಣಗಳೂ ಕಂಡು ಬರಬಹುದು. ನಿರ್ಲಕ್ಷ್ಯ ಬೇಡ ಲಸಿಕೆ ಪಡೆದ ಹೆಚ್ಚಿನವರಲ್ಲಿ ನನಗೆ ಲಸಿಕೆ ಸಿಕ್ಕಾಗಿದೆ ಇನ್ನೇನು ಭಯವಿಲ್ಲ ಎಂಬ ಆಲೋಚನೆ ಇದೆ, ಆದರೆ ತಜ್ಞರ ಪ್ರಕಾರ ಈ ಆಲೋಚನೆ ಸರಿಯಲ್ಲ... ಕೊರೊನಾ ಲಸಿಕೆ ಪಡೆದವರಿಗೂ ಕೊರೊನಾ ತಗುಲಬಹುದು, ಆದ್ದರಿಂದ ಹೊರಗಡೆ ಹೋಗುವಾಗ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆರೋಗ್ಯಕರ ಆಹಾರ ಸೇವಿಸಿ, ವ್ಯಾಯಾಮ ಮಾಡಿ. ರೋಗ ಲಕ್ಷಣಗಳು ಕಂಡು ಬಂದಾಗ ಕೂಡಲೇ ಪರೀಕ್ಷಿಸಿ, ತಡಮಾಡಿದಷ್ಟೂ ಅಪಾಯ ಹೆಚ್ಚು, ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಬೇಗನೆ ಗುಣಮುಖರಾಗಬಹುದು.