ನವದೆಹಲಿ: ಸಿಂಗಲ್ ಡೋಸ್ ಕೋವಿಡ್ ಲಸಿಕೆ ಸ್ಪುಟ್ನಿಕ್ -ಲೈಟ್ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆಯನ್ನು ನಿರಾಕರಿಸಿದ್ದು, ದೇಶದಲ್ಲಿ ರಷ್ಯಾ ನಿರ್ಮಿತ ಲಸಿಕೆಯ ಮೂರನೇ ಹಂತದ ಪ್ರಯೋಗದ ಅಗತ್ಯವನ್ನು ತಳ್ಳಿ ಹಾಕಿದೆ.
ಜುಲೈ 30 ರಂದು ನಡೆದ ವಿಷಯ ತಜ್ಞರ ಸಮಿತಿ ಸಭೆಯ ಶಿಫಾರಸ್ಸಿನ ಪ್ರಕಾರ, ಸ್ಪುಟ್ನಿಕ್ -ಲೈಟ್ ಕೂಡಾ ಸ್ಪುಟ್ನಿಕ್ ವಿ ಅಂಶಗಳನ್ನು ಹೊಂದಿದ್ದು, ಸುರಕ್ಷಿತವಾಗಿದೆ ಎನ್ನಲಾಗಿದೆ. ಗುರುವಾರ ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಕೇಂದ್ರೀಯ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ವೆಬ್ ಸೈಟ್ ನಲ್ಲಿ ಅಳವಡಿಸಲಾಗಿದೆ.
ಸ್ಪುಟ್ನಿಕ್ -ಲೈಟ್ ಲಸಿಕೆಯ ಮಾರುಕಟ್ಟೆಗೆ ಅನುಮತಿ ಕೋರಿ ಡಿಸಿಜಿಐಗೆ ಪ್ರಸ್ತಾವನೆ ಸಲ್ಲಿಸಿದ್ದ ಡಾ ರೆಡ್ಡೀ'ಸ್ ಲ್ಯಾಬೋರೇಟರೀಸ್, ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುವ ಪ್ರೋಟೋಕಾಲ್ ಅನ್ನು ಸಮಿತಿಯ ಮುಂದೆ ಮಂಡಿಸಿತ್ತು.
ಸ್ಪುಟ್ನಿಕ್ ವಿ (ಅಂದರೆ, ಸ್ಪುಟ್ನಿಕ್-ಲೈಟ್) ನ ಮೊದಲ-ಡೋಸ್ ಅಂಶ ಕುರಿತು ದೇಶದಲ್ಲಿ ಈಗಾಗಲೇ ಡಾ. ರೆಡ್ಡೀಸ್ ಲ್ಯಾಬೋರೆಟರಿ ನೀಡಿರುವ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಡೇಟಾವನ್ನು ಗಮನದಲ್ಲಿಟ್ಟುಕೊಂಡು, ಪ್ರತ್ಯೇಕ ಮೂರನೇ ಹಂತದ ಪ್ರಯೋಗ ಅಗತ್ಯವಿಲ್ಲ ಎಂದು ವಿಶೇಷ ತಜ್ಞರ ಸಮಿತಿ ತಿಳಿಸಿದೆ.