ನವದೆಹಲಿ|: ಡಿಆರ್ ಡಿಒ ಭಾರತದ ಹೊಸ ತಲೆಮಾರಿನ ಆಕಾಶ್ ಕ್ಷಿಪಣಿ ಪ್ರಯೋಗವನ್ನು ಜು.21 ರಂದು ಯಶಸ್ವಿಯಾಗಿಸಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ವ್ಯವಸ್ಥೆ ಇದಾಗಿದ್ದು ಒಡಿಶಾದ ಕಡಲ ತೀರದಲ್ಲಿ ಈ ಪ್ರಯೋಗ ನಡೆಸಲಾಗಿದೆ. 12:45 ರ ಸುಮಾರಿಗೆ ಕ್ಷಿಪಣಿ ಪ್ರಯೋಗ ನಡೆದಿದ್ದು, ಯಾವುದೇ ಸಮಸ್ಯೆ ಇಲ್ಲದೇ ನಿರೀಕ್ಷಿತ ಪ್ರಮಾಣದಲ್ಲಿ ಕ್ಷಿಪಣಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಫ್ಲೈಟ್ ಡೇಟಾ ದೃಢಪಡಿಸಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಹೊಸ ಆವೃತ್ತಿಯ ಆಕಾಶ್ ಕ್ಷಿಪಣಿ (ಆಕಾಶ್ ಎನ್ ಜಿ) 60 ಕಿ.ಮೀಟರ್ ದೂರದ ಗುರಿಯನ್ನೂ ತಲುಪಬಲ್ಲದು ಹಾಗೂ ಮಾಚ್2.5. ನವರೆಗಿನ ವೇಗದಲ್ಲಿ ಹಾರಬಲ್ಲದು ಹೈದರಾಬಾದ್ ನ ಡಿಆರ್ ಡಿಒ ಪ್ರಯೋಗಾಲಯದಲ್ಲಿ ಈ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.