ತಿರುವನಂತಪುರ: ಹೆಚ್ಚುವರಿ 3 ಲಕ್ಷ ಕೊರೋನಾ ಪರೀಕ್ಷೆಗಳನ್ನು ಶುಕ್ರವಾರ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ನಿರ್ಬಂಧಗಳನ್ನು ಸದ್ಯಕ್ಕೆ ಸಡಿಲಗೊಳಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿರುವರು. ಪ್ರಸ್ತುತ ಎಲ್ಲಾ ವಿಭಾಗದ ಮೇಲಿನ ನಿಯಂತ್ರಣ ಇನ್ನೂ ಒಂದು ವಾರ ಮುಂದುವರಿಯಲಿದೆ ಎಂದು ಅವರು ಹೇಳಿದರು. ಇಂದು ಸಂಜೆ ನಡೆದ ಕೊರೋನಾ ಪರಿಶೀಲನಾ ಸಭೆಯಲ್ಲಿ ಸಿಎಂ ಮಾತನಾಡುತ್ತಿದ್ದರು.
ಪರೀಕ್ಷಾ ಸಕಾರಾತ್ಮಕ ದರವು ಶೇಕಡಾ 10.8 ಕ್ಕಿಂತ ಹೆಚ್ಚಳಗೊಂಡಿದೆ. ಮಲಪ್ಪುರಂ, ಕೋಝಿಕೋಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕುಗಳು ವರದಿಯಾಗುತ್ತಿವೆ. ಟಿಪಿಆರ್ ಹೆಚ್ಚಳವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಜಿಲ್ಲಾಡಳಿತಗಳು ಪ್ರಬಲ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತ ಇಲಾಖೆ ಈ ವಿಷಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಜನರೊಂದಿಗೆ ನೇರವಾಗಿ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ವಾರ್ಡ್ ಮಟ್ಟದ ಜಾಗೃತ ಸಮಿತಿಗಳನನ್ನು ಬಲಪಡಿಸಲಾಗುವುದು. ಮೈಕ್ರೋ ಕಂಟೈನ್ಮೆಂಟ್ ಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗುತ್ತದೆ. ಇಡುಕ್ಕಿಯಲ್ಲಿನ ಚಹಾ ತೋಟ ಕಾರ್ಮಿಕರು ಕೆಲಸಕ್ಕಾಗಿ ಪ್ರತಿದಿನ ಗಡಿ ದಾಟುವುದನ್ನು ಕಡಿಮೆಗೊಳಿಸಬೇಕು. ಆಯಾ ಸ್ಥಳಗಳಲ್ಲಿ ತಂಗಲು ಮತ್ತು ಕೆಲಸ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಸಿಎಂ ಹೇಳಿದರು.