ಉದಕಮಂಡಲ: ತಮಿಳುನಾಡಿನ ನೀಲಗಿರಿ ಜಿಲ್ಲೆಗೆ ಭೇಟಿ ನೀಡುವ ಕರ್ನಾಟಕ ಮತ್ತು ಕೇರಳದ ಪ್ರವಾಸಿಗರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಇ-ಪಾಸ್ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಜೆ. ಇನ್ನೊಸೆಂಟ್ ದಿವ್ಯಾ ಸೋಮವಾರ ಹೇಳಿದ್ದಾರೆ.
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ನೀಲಗಿರಿಯ ಪ್ರಸಿದ್ಧ ಪ್ರವಾಸಿ ತಾಣಗಳನ್ನು ತೆರೆಯುವ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
65 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೈಟ್ ಸ್ಮಾರಕ ಸರ್ಕಾರಿ ಹೆರಿಗೆ ಆಸ್ಪತ್ರೆಯ ಉದ್ಘಾಟನೆಯ ಕುರಿತು ಮಾಹಿತಿ ನೀಡಿದ ಅವರು, 'ಕೋವಿಡ್ ನಿರ್ಬಂಧ ತೆರವುಗೊಳಿಸಿರುವ 11 ಜಿಲ್ಲೆಗಳಲ್ಲಿ ಮಾತ್ರ ರಾಜ್ಯ ಸರ್ಕಾರ ಶುಕ್ರವಾರದಿಂದ ಇ-ಪಾಸ್‌ಗೆ ವಿನಾಯ್ತಿ ನೀಡಿದೆ' ಎಂದು ಹೇಳಿದ್ದಾರೆ.