ತಿರುವನಂತಪುರ:ಕಂದಾಯ ಇಲಾಖೆಯ ಕಾರ್ಯದರ್ಶಿ ಒ.ಜಿ.ಶಾಲಿನಿ ಅವರÀ ಉತ್ತಮ ಸೇವಾ ಪ್ರವೇಶ ರದ್ದತಿ ಆದೇಶವನ್ನು ಸರ್ಕಾರ ನವೀಕರಿಸಿದೆ. ತಿದ್ದುಪಡಿಯಲ್ಲಿ ಸರ್ಕಾರವು ತಪಾಸಣೆಯಲ್ಲಿ ದೋಷವಿದೆ ಎಂದು ಕಂಡುಬಂದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರ್ಕಾರ ಆದೇಶವನ್ನು ನವೀಕರಿಸಿತು. ಉತ್ತಮ ಸೇವಾ ಪ್ರವೇಶ ಹಿಂಪಡೆಯಲಾಗಿದೆ.
ಕಂದಾಯ ಇಲಾಖೆಯ ಅಂಡರ್ ಸೆಕ್ರೆಟರಿ ಒ.ಜಿ.ಶಾಲಿನಿಯವರ ಉತ್ತಮ ಸೇವಾ ಪ್ರವೇಶವನ್ನು ರದ್ದುಪಡಿಸಿದ ವಿವಾದದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶವನ್ನು ನವೀಕರಿಸಿದೆ. ಪರಿಷ್ಕøತ ಆದೇಶದಲ್ಲಿ ಶಾಲಿನಿ ವಿರುದ್ಧದ ಕ್ರಮವನ್ನು ಸರ್ಕಾರ ಪರಿಶೀಲಿಸಿದೆ ಎಂದು ಹೇಳಿದೆ. ಇದನ್ನು ಮೊದಲು ಕಂದಾಯ ಪ್ರಧಾನ ಕಾರ್ಯದರ್ಶಿ ಪರಿಶೀಲಿಸಿದ್ದಾರೆ ಎಂದು ಹೇಳಲಾಗಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ವಿವಾದಾತ್ಮಕ ಮರದ ಕೊರಡು ಪ್ರಕರಣದ ಫೈಲ್‍ಗಳನ್ನು ಒದಗಿಸಿದ ಅಂಡರ್ ಸೆಕ್ರೆಟರಿ ಒ.ಜಿ.ಶಾಲಿನಿಯವರ ಉತ್ತಮ ಸೇವಾ ನಮೂದನ್ನು ನಿನ್ನೆ ಹಿಂಪಡೆಯಲಾಗಿದೆ.
ಶಾಲಿನಿಯ ಚಟುವಟಿಕೆಗಳು ಅತೃಪ್ತಿಕರವಾಗಿದೆ ಎಂದು ಆಂತರಿಕ ತನಿಖೆಯಿಂದ ತಿಳಿದುಬಂದ ಕಾರಣ ಉತ್ತಮ ಸೇವಾ ಪ್ರವೇಶವನ್ನು ಹಿಂಪಡೆಯಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ ಜಯತಿಲಕ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಆಗ ಕಂದಾಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಸರ್ಕಾರ ಈ ಮೊದಲು ಶಾಲಿನಿಯನ್ನು ಎರಡು ತಿಂಗಳ ರಜೆ ಮೇಲೆ ತೆರಳುವಂತೆ ಕೇಳಿಕೊಂಡಿತ್ತು. ಮರದ ಕೊರಡು ವಿವಾದದ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಾಮೂಹಿಕವಾಗಿ ಸ್ಥಳಾಂತರಿಸುವ ಮೂಲಕ ಈ ವಿವಾದಕ್ಕೆ ನಾಂದಿ ಹಾಡಲಾಗಿತ್ತು.