ಇಡುಕ್ಕಿ: ರಾಜ್ಯದ ಮೊದಲ ಬುಡಕಟ್ಟು ಪಂಚಾಯತ್ ಇಡಮಲಕ್ಕುಡಿಯಲ್ಲಿ ಇದೇ ಮೊದಲ ಬಾರಿ ಕೊರೋನಾ ದೃಢಪಟ್ಟಿದೆ. ಇರುಪ್ಪಕಲ್ಲು ಗ್ರಾಮದ 40 ವರ್ಷದ ಮಹಿಳೆ ಮತ್ತು ಇಡ್ಲಿಪ್ಪರ ಗ್ರಾಮದ 24 ವರ್ಷದ ಯುವಕನಿಗೆ ಈ ವೈರಸ್ ಇರುವುದು ಪತ್ತೆಯಾಗಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಡಮಲಕ್ಕುಡಿಯಲ್ಲಿ ಕೊರೋನಾ ದೃಢಪಟ್ಟಿದೆ.
40ರ ಹರೆಯದ ಮಧ್ಯವಯಸ್ಕೆಗೆ ದೈಹಿಕ ಸಮಸ್ಯೆಗಳಿಂದಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಯಲ್ಲಿ ನಿನ್ನೆ ಚಿಕಿತ್ಸೆ ಪಡೆದಿದ್ದರು. ಇಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೊರೋನಾ ದೃಡಪಟ್ಟಿದೆ. ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಆರಂಭಿಕ ರೋಗಲಕ್ಷಣಗಳನ್ನು ಅನುಸರಿಸಿ 24 ವರ್ಷದ ಯುವಕನಿಗೆ ಮುನ್ನಾರ್‌ನ ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ಪರಿಶೋಧನೆಯಲ್ಲಿ ಸೋಂಕು ಪತ್ತೆಯಾಗಿದೆ.
ಇಡಮಲಕ್ಕುಡಿಯಲ್ಲಿ ಕೊರೋನಾ ಹರಡುವುದನ್ನು ತಡೆಯಲು ಅಧಿಕಾರಿಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೊರಗಿನಿಂದ ಬರುವವರಿಗೆ ತಪಾಸಣೆ ಮಾಡಿದ ನಂತರವೇ ಪಂಚಾಯತ್ ಪ್ರವೇಶಿಸಲು ಅವಕಾಶವಿರುತ್ತದೆ. ಪಂಚಾಯತ್ ಒಳಗೆ ಮತ್ತು ಹೊರಗೆ ಜನರ ಅನಗತ್ಯ ಸಂಚಾರ ನಿರ್ಬಂಧಿಸಲಾಗಿದೆ. ಇಷ್ಟಿದ್ದೂ ಹಠಾತ್ ಇಬ್ಬರಲ್ಲಿ ಸೋಂಕು ಉಂಟಾಗಲು ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸೋಂಕು ದೃಢಪಟ್ಟಿರುವ ಕಾರಣ ಪಂಚಾಯಿತಿ ವ್ಯಾಪ್ತಿಗೆ ವಿಜಿಲೆನ್ಸ್ ಆದೇಶ ಹೊರಡಿಸಿದೆ.