ಕಾಸರಗೋಡು: ನಗರದ ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ವತಿಯಿಂದ ವ್ಯಾಸ ಪೂರ್ಣಿಮೆಯ ಶುಭದಿನದಂದು ಹಿರಿಯ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.
ಕೋಟೆಕಣಿ ಪರಿಸರದ ಹಿರಿಯ ಗುರುಗಳಾದ ನಿವೃತ್ತ ಶಿಕ್ಷಕÀ ಎ.ನರಸಿಂಹ ಭಟ್, ಕೃಷ್ಣ ಬಾಯಿ ಟೀಚರ್ ಹಾಗೂ ಸುಂದರ ಶೆಟ್ಟಿ ಮಾಸ್ಟರ್ ಅವರಿಗೆ ಗೌರವಗಳೊಂದಿಗೆ ಶಾಲು ಹೊದಿಸಿ ಭಕ್ತಿ ಭಾವನೆಯೊಂದಿಗೆ ಗುರುವಂದನಾ ಕಾರ್ಯಕ್ರಮ ನಡೆಸುವ ಮೂಲಕ ಅವರ ಆಶೀರ್ವಾದ ಪಡೆಯಲಾಯಿತು.
ನಗರ ಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಬಾಲಗೋಕುಲ ಅಧ್ಯಕ್ಷ ಭರತೇಶ್, ಕಾರ್ಯದರ್ಶಿ ಅಪರ್ಣ ಗಣೇಶ್, ಮೋದಕ್ ರಾಜ್, ಭಾಗ್ಯರಾಜ್, ದಿನೇಶ್, ಶಿವ ಶಂಕರ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.