HEALTH TIPS

'ಷರತ್ತಿನೊಂದಿಗೆ ನಾಳೆಯಿಂದ ಕಾಸರಗೋಡು ಬಸ್ ಸಂಚಾರ ಆರಂಭ' - ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

       ಮಂಗಳೂರು: "ಜಿಲ್ಲೆಯಲ್ಲಿ ಕೊರೊನಾ ಆನ್‌‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದು, ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹೆಚ್ಚಿನ ಜಾಗರೂಕತೆಯನ್ನು ಅನುಸರಿಸುವ ಅನಿವಾರ್ಯವಿದ್ದು, ಮುಂಬರುವ ದಿನಗಳಲ್ಲಿ ಸಂಭಾವ್ಯ 3 ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ.

        ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ವಿದ್ಯಾಭ್ಯಾಸ, ಕಚೇರಿ ಕಲಸ, ವ್ಯಾಪಾರ ವ್ಯವಹಾರ ಸೇರಿದಂತೆ ಇತರ ಕಾರಣಗಳಿಗೆ ಸಂಖ್ಯೆಯಲ್ಲಿ ದಿನನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ಮಾಡುತ್ತಿದ್ದು, ಕಾಸರಗೋಡು-ಮಂಗಳೂರು ನಡುವಿನ ಬಸ್ ಸಂಚಾರಕ್ಕೆ ನಾಳೆಯಿಂದ ಷರತ್ತಿನೊಂದಿಗೆ ಅನುಮತಿಸಲಾಗಿದೆ.
      ಕೆಎಸ್ಆರ್‌‌ಟಿಸಿ ಮತ್ತು ಖಾಸಗಿ ಬಸ್ ಗಳ ಮೂಲಕ ಪ್ರಯಾಣಿಸುವವರು ಕೋವಿಡ್ ಲಸಿಕ ಕನಿಷ್ಠ 1 ಡೋಸ್ ಪಡೆದಿರುವ ಅಥವಾ 72 ಗಂಟೆಗಳ ಒಳಗೆ ಮಾಡಿಸಿರುವ RT-PCR ಪರೀಕ್ಷೆಯ ನಗೆಟಿವ್ ವರದಿಯನ್ನು ಆಯಾ ಬಸ್ ನ ನಿರ್ವಾಹಕರು ಖಚಿತಪಡಿಸಕೊಳ್ಳಬೇಕು.
‌‌‌‌      ಮಾಸ್ಕ್ ಧರಿಸುವುದು, ಸಾರ್ವಜನಿಕ ಅಂತರ ಕಾಪಾಡಿಕೊಳ್ಳುವ ಕ್ರಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಕರ್ನಾಟಕ ಸಾಂಕ್ರಮಿಕ ರೋಗಗಳ ಅಧಿನಿಯಮ-2020, ವಿಪತ್ತು ನಿರ್ವಹಣಾ ಕಾಯ್ದೆ, 2005 ರಡಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries