ಕಾಸರಗೋಡು: ವಿದ್ಯಾನಗರದ ಸರಕಾರಿ ಅಂಧ ವಿದ್ಯಾಲಯದಲ್ಲಿ ಸಂಪೂರ್ಣ ಕಲಿಕಾ ಸೌಲಭ್ಯ ಏರ್ಪಡಿಸಲಾಗಿದೆ.
ಸ್ಮಾರ್ಟ್ ಫೆÇೀನ್ ಸೌಲಭ್ಯಗಳಿಲ್ಲದ 14 ಮಂದಿ ಮಕ್ಕಳಿಗೆ ಉಚಿತ ರೂಪದಲ್ಲಿ ಸ್ಮಾರ್ಟ್ ಫೆÇೀನ್ ಒದಗಿಸಲಾಗಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕಾಸರಗೋಡು ಘಟಕ, ಕಾಞಂಗಾಡು ಆನಂದಾಶ್ರಮ, ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್, ಜುವೆಂಟ್ಸ್ ಸಾಮಾಜಿಕ ಮಾಧ್ಯಮ ಒಕ್ಕೂಟ, ಸ್ಪೆಷ್ಯಲ್ ಟಿ.ಟಿ.ಸಿ. ಸೆಂಟರ್ ಹಳೆ ವಿದ್ಯಾರ್ಥಿಗಳು, ಚೆರುತಾಳಂ ರಾಘವಪುರಂ ಸಭಾಯೋಗಂ ಇತ್ಯಾದಿ ಸಂಸ್ಥೆಗಳ ಸಹಕಾರದಿಂದ ಈ ಯೋಜನೆ ಜಾರಿಗೊಂಡಿದೆ.
ಕಾಸರಗೋಡು ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ಅವರು ಫೆÇೀನ್ ವಿತರಣೆಗೆ ಚಾಲನೆ ನೀಡಿದರು. ಐ.ಎಂ.ಎ. ಅಧ್ಯಕ್ಷ ಡಾ.ನಾರಾಯಣ ನಾಯ್ಕ್, ಡಾ.ಬಿ.ಎಸ್.ರಾವ್, ಡಾ.ಎ.ವಿ.ಭರತನ್, ಡಾ.ಜನಾರ್ದನ ನಾಯ್ಕ್, ಇ.ಅಬೂಬಕ್ಕರ್ ಹಾಜಿ, ಪಿ.ನಾರಾಯಣನ್, ರಾಜೇಶ್ ಬಾಬು ಮೊದಲಾದವರು ಉಪಸ್ಥಿತರಿದ್ದರು.