ತಿರುವನಂತಪುರ: ರಾಜ್ಯದ ಸರ್ಕಾರಿ ಕಚೇರಿಗಳಿಗೆ ಶ|ನಿವಾರವೂ ಪೂರ್ಣ ಪ್ರಮಾಣದ ರಜೆ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿದೆ ಎಮದು ಬಲ್ಲಮೂಲಗಳಿಂದ ತಿಳಿದುಬಂದಿದೆ. ವಿ.ಎಸ್.ಅಚುತಾನಂದನ್ ಅವರು ಅಧ್ಯಕ್ಷರಾಗಿರುವ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನ ಮೇರೆಗೆ "ಪೈವ್ ಡೇ ವೀಕ್À" ಎಂಬ ಪರಿಕಲ್ಪನೆಯನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಿದ ವರದಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರಿಗಣಿಸುತ್ತಿದ್ದಾರೆ ಎಂದು ವರದಿಯಾಗಿದೆ. ಮುಖ್ಯಮಂತ್ರಿಗೆ ಸಲ್ಲಿಸಿದ ವರದಿಯನ್ನು ಆಡಳಿತ ಸುಧಾರಣಾ ಇಲಾಖೆ ಮತ್ತು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿಯು ಪರಿಶೀಲಿಸಿತು ಮತ್ತು ತಿದ್ದುಪಡಿ ಮಾಡಿತು.
ಶನಿವಾರದಂದು ರಜೆ ಲಭ್ಯವಾದಲ್ಲಿ, ಸರ್ಕಾರಿ ನೌಕರನಿಗೆ ವರ್ಷಕ್ಕೆ 12 ದಿನಗಳ ರಜೆ ಇರುತ್ತದೆ, ಆದರೆ ಸಾರ್ವಜನಿಕ ರಜಾದಿನಗಳು, ವಿಶೇಷ ರಜಾದಿನಗಳು ಮತ್ತು ನಿಬರ್ಂಧಿತ ರಜಾದಿನಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರೊಂದಿಗೆ ಕರ್ತವ್ಯದ ಸಮಯದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಆಡಳಿತ ಸುಧಾರಣಾ ಆಯೋಗದ ವರದಿಯು ಕರ್ತವ್ಯದ ಸಮಯವನ್ನು ಒಂದೂವರೆ ಗಂಟೆಗಳವರೆಗೆ ಹೆಚ್ಚಿಸಬೇಕು ಎಂದು ಸೂಚಿಸುತ್ತದೆ. ಪ್ರಸ್ತುತ ಕರ್ತವ್ಯ ಸಮಯವನ್ನು 7 ಗಂಟೆಗಳಿಂದ ಅರ್ಧ ಗಂಟೆ ಅಥವಾ ಒಂದು ಗಂಟೆಗೆ ಹೆಚ್ಚಿಸಲಾಗುವುದು.
ಸರ್ಕಾರಿ ಸಂಸ್ಥೆಗಳಲ್ಲಿ ಪ್ರಸ್ತುತ ಕೆಲಸದ ಸಮಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ. ಈ ವೇಳಾಪಟ್ಟಿಯನ್ನು ಬದಲಾಯಿಸಲು ಮತ್ತು ಕೆಲಸದ ಸಮಯವನ್ನು ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ಹೊಂದಿಸಲು ಸಹ ಪ್ರಸ್ತಾಪಿಸಲಾಗಿದೆ. ಸಚಿವಾಲಯವು ಬೆಳಿಗ್ಗೆ 10.15 ರಿಂದ ಸಂಜೆ 5.15 ರವರೆಗೆ ಕಾರ್ಯನಿರ್ವಹಿಸಲು ಸೂಚಿಸಲಾಗುವುದು. ಮಧ್ಯಾಹ್ನದ ಬಿಡುವು ಒಂದು ಮತ್ತು ಎರಡು ಗಂಟೆಯ ನಡುವೆ ಇರುತ್ತದೆ. ಆದರೆ ಊಟಕ್ಕೆ ಅರ್ಧ ಘಂಟೆಯವರೆಗೆ ಮಾತ್ರ ಅವಕಾಶವಿದೆ.
ಆಯೋಗ ಸೂಚಿಸಿರುವಂತೆ ವಾರದಲ್ಲಿ ಎರಡು ದಿನ ರಜೆ ನೀಡುವುದರಿಂದ ನೌಕರರ ಒತ್ತಡ ಕಡಿಮೆಯಾಗುತ್ತದೆ. ಆದರೆ, ಸುಧಾರಣಾ ಆಯೋಗದ ವರದಿಯ ಬಗ್ಗೆ ಸರ್ಕಾರ ಇನ್ನೂ ಸಕಾರಾತ್ಮಕ ನಿಲುವು ತೆಗೆದುಕೊಂಡಿಲ್ಲ. ವ್ಯಾಪಕ ವಿರೋಧದ ಸಾಧ್ಯತೆಯನ್ನು ತಳ್ಳಿಹಾಕುವಂತೆಯೂ ಇಲ್ಲ. . ಸಾರ್ವಜನಿಕರಿಂದ ಮತ್ತು ನೌಕರರಿಂದ ವಿರೋಧ ಹೆಚ್ಚುವ ಸಾಧ್ಯತೆಯೂ ಇದೆ. ನೌಕರರ ಯೂನಿಯನ್ ಗಳೊಂದಿಗೆ ಮಾತುಕತೆ ಕೂಡ ಅಗತ್ಯವಿದೆ.