ತಿರುವನಂತಪುರ: ಬಸ್‍ಗಳಿಗೆ ರಿವರ್ಸ್ ಹಾರ್ನ್ ವ್ಯವಸ್ಥೆಯನ್ನು ಸ್ಥಾಪಿಸಲು ಕೆಎಸ್‍ಆರ್‍ಟಿಸಿ ಸಜ್ಜಾಗಿದೆ. ಬಸ್ ಹಿಮ್ಮುಖವಾಗಿ ಚಲಿಸುವಾಗ ಅಪಘಾತಗಳಿಗೆ ಕಾರಣವಾಗಬಾರದೆಂದು ಈ ಹೊಸ ವ್ಯವಸ್ಥೆ ಜಾರಿಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ. ಪರಿಷ್ಕøತ ಮಾರ್ಗಸೂಚಿಯನ್ನು ಹೊರಡಿಸಿದೆ. ಇತ್ತೀಚೆಗೆ ತಂಬಾನೂರ್ ಡಿಪೆÇೀದಲ್ಲಿ ಬಸ್ ಹಿಂಬದಿ ಚಲಿಸುವಾಗ ಉಂಟಾದ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.
ಎಲ್ಲಾ ಬಸ್‍ಗಳಲ್ಲಿ ರಿವರ್ಸ್ ಹಾರ್ನ್ ಅಳವಡಿಸಲು ಸಿಎಂಡಿ ಬಿಜು ಪ್ರಭಾಕರ್ ನಿರ್ದೇಶನ ನೀಡಿದ್ದಾರೆ. ಕಾಯ್ದಿರಿಸಿದ ಆಸನಗಳನ್ನು ಪ್ರಯಾಣಿಕರು ತ್ವರಿತವಾಗಿ ಗುರುತಿಸಲು ವಿಶೇಷ ಬಣ್ಣಗಳೊಂದಿಗೆ ಬಣ್ಣ ಬಳಿಯಲಾಗುತ್ತದೆ. ಅಪಘಾತ ಅಥವಾ ಸ್ಥಗಿತದಿಂದಾಗಿ ಪ್ರಯಾಣಿಕರನ್ನು ಇನ್ನು ಮುಂದೆ 30 ನಿಮಿಷಗಳಿಗಿಂತ ಹೆಚ್ಚು ಕಾಲ ರಸ್ತೆಯಲ್ಲಿ ಕಾಯಿಸುವಂತಿಲ್ಲ. ಅಂತಹ ಪರಿಸ್ಥಿತಿ ಇದ್ದಲ್ಲಿ ಶೀಘ್ರದಲ್ಲೇ ಬದಲಿ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಬಿಜು ಪ್ರಭಾಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಎಂ.ಡಿ. ಅವರು ಎಲ್ಲಾ ಬಸ್‍ಗಳಿಗೆ ಏರ್ ವೆಂಟ್ ಬಾಗಿಲುಗಳು, ವಾಟರ್ ಬಾಟಲ್ ವ್ಯವಸ್ಥೆ, ಚಾಲಕರ ಅನುಕೂಲಕ್ಕಾಗಿ ಚಾಲಕರ ಆಸನಗಳು ಮತ್ತು ಚಾಲಕರ ಕ್ಯಾಬಿನ್‍ನಲ್ಲಿನ ಶಾಖವನ್ನು ಕಡಿಮೆ ಮಾಡಲು ವ್ಯವಸ್ಥೆಗಳು, ಸ್ಥಳದ ಹೆಸರಿನ ಬೋರ್ಡ್‍ಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವ ವಿಶೇಷ ಎಲ್‍ಇಡಿ ಬೋರ್ಡ್‍ಗಳನ್ನು ಸ್ಥಾಪಿಸುವಂತೆ ನಿರ್ದೇಶಿಸಲಾಗಿದೆ.